ಬುಗುರಿ ಆಡಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ... ವಿಡಿಯೋ ಸಖತ್ ವೈರಲ್ - ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
🎬 Watch Now: Feature Video
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬುಗುರಿ ಆಡಿಸಿರುವ ವಿಡಿಯೊ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಹಿಂದೆ ಕೆಎಸ್ಆರ್ಪಿ ಎಡಿಜಿಪಿ ಯಾಗಿದ್ದಾಗ ಮಕ್ಕಳೊಂದಿಗೆ ಬುಗುರಿಯಾಟ ಆಡಿದ್ದಾರೆ ಎನ್ನಲಾಗಿರುವ ವಿಡಿಯೋ ಇದಾಗಿದೆ. ಪ್ರಕರಣವೊಂದರ ಕುರಿತು ತಪಾಸಣೆಗೆ ತೆರಳಿದ್ದ ಭಾಸ್ಕರ್ರಾವ್ ಈ ವೇಳೆ ಅಲ್ಲಿಯೇ ಬುಗುರಿಯಾಟವಾಡುತ್ತಿದ್ದ ಪುಟ್ಟ ಮಕ್ಕಳನ್ನು ಕಂಡಿದ್ದಾರೆ. ಆಗ ಅವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿ, ಮಕ್ಕಳಿಂದ ಬುಗುರಿ ಪಡೆದು ಆಟವಾಡಿದ್ದಾರೆ. ಗಿರ ಗಿರನೆ ಬುಗುರಿಯಾಡಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಸದ್ಯ 16 ಸೆಕೆಂಡ್ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆಯುಕ್ತರ ಕ್ರೀಡಾ ಸ್ಫೂರ್ತಿಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.