ವರ್ಷಗಳು ಕಳೆದರೂ ನಿರ್ಮಾಣವಾಗದ ಪಿಎಂ ಆವಾಸ್ ಯೋಜನೆ ಮನೆಗಳು: ಬೀದಿಗೆ ಬಿದ್ದ ಜನ - ಹುಬ್ಬಳ್ಳಿಯಲ್ಲಿ ಪೂರ್ಣಗೊಳ್ಳದ ಪಿಎಂ ಆವಾಸ್ ಯೋಜನೆ ಮನೆಗಳು
🎬 Watch Now: Feature Video
ಅವರೆಲ್ಲಾ ಇದ್ದ ಮನೆಯಲ್ಲಿ ಹೇಗೋ ಸಂತೋಷದಿಂದ ಜೀವನ ನಡೆಸುತ್ತಿದ್ರು. ಆದ್ರೆ, ನಿಮಗೆ ಹೊಸ ಮನೆಗಳನ್ನು ಕಟ್ಟಿ ಕೊಡ್ತೀವಿ ಎಂದು ಆಸೆ ತೋರಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಮನೆಗಳನ್ನು ಕೆಡವುವಂತೆ ತಿಳಿಸಿದ್ದರು. ಹೊಸ ಮನೆ ನಿರ್ಮಾಣವಾಗುತ್ತಲ್ಲ ಎಂದು ನಂಬಿದ ಬಡ ಜನರು, ಇದ್ದ ಮನೆಗಳನ್ನು ಕೆಡವಿ ಈಗ ಅತ್ತ ಕಡೆ ಹಳೆ ಮನೆಗಳೂ ಇಲ್ಲ, ಇತ್ತ ಕಡೆ ಹೊಸ ಮನೆಗಳೂ ಇಲ್ಲ ಎಂಬತಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ.