ಮಧ್ಯರಾತ್ರಿ ಪ್ಲಾಸ್ಮಾ ದಾನ ಮಾಡಿದ ಗಜಾನನ ಹಬೀಬ... ಗುಣಮುಖನಾದ ರೋಗಿ - ಕೋವಿಡ್-19 ರೋಗ
🎬 Watch Now: Feature Video
ಹುಬ್ಬಳ್ಳಿ: ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪ್ಲಾಸ್ಮಾ ದಾನ ಮಾಡುವ ಮೂಲಕ ಗಜಾನನ ಹಬೀಬ ಎಂಬುವರು ಮಾನವೀಯತೆಯ ಮೆರೆದಿದ್ದಾರೆ. ಪ್ಲಾಸ್ಮಾ ಪಡೆದ ರೋಗಿ ಈಗ ಗುಣಮುಖರಾಗಿದ್ದಾರೆ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಂಕಿತ ವ್ಯಕ್ತಿಯ ಚಿಕಿತ್ಸೆಗೆ ಬಿ ಪಾಸಿಟಿವ್ ಪ್ಲಾಸ್ಮಾ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ಗಜಾನನ ಅವರು ಪ್ಲಾಸ್ಮಾ ದಾನ ಮಾಡಿದ್ದಾರೆ. ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಲು ಮುಂದಾಗಬೇಕು ಗಜಾನನ ಹಬೀಬ ಎಂದು ಮನವಿ ಮಾಡಿದ್ದಾರೆ.