ಶಿಗ್ಗಾಂವಿ ಪಟ್ಟಣದ ಪಿಗ್ಮಿ ಕಲೆಕ್ಟರ್ಗೂ ಕೊರೊನಾ ದೃಢ - ಶಿಗ್ಗಾಂವಿ
🎬 Watch Now: Feature Video
ಹಾವೇರಿ: ಇಲ್ಲಿನ ಶಿಗ್ಗಾಂವಿ ಪಟ್ಟಣದ ಪಿಗ್ಮಿ ಕಲೆಕ್ಟರ್ಗೆ ಕೊರೊನಾ ದೃಢಪಟ್ಟಿದೆ. ಕಂಟೇನ್ಮೆಂಟ್ ಜೋನ್ನ ಪೇಷೆಂಟ್ ನಂಬರ್ P8292ರ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದೆ. ಈ ಪಿಗ್ಮಿ ಕಲೆಕ್ಟರ್ ಕಿತ್ತೂರು ರಾಣಿ ಚೆನ್ನಮ್ಮ ಕೋ-ಆಪರೇಟಿವ್ ಸೊಸೈಟಿಯಲ್ಲಿ ಹಣ ಜಮಾ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಹೋಲ್ಸೇಲ್ ಅಂಗಡಿಗಳಿಗೆ ಸಕ್ಕರೆ ಸರಬರಾಜು ಮಾಡುತ್ತಿದ್ದ ಎನ್ನಲಾಗಿದ್ದು, ಜೂನ್ 17ರಂದು ಬಂಕಾಪುರ ಪಟ್ಟಣದ 11 ಹೋಲ್ಸೇಲ್ ಅಂಗಡಿಗಳಿಗೆ ಮತ್ತು ಶಿಗ್ಗಾಂವಿ ಪಟ್ಟಣದ 6 ಹೋಲ್ಸೇಲ್ ಅಂಗಡಿಗಳಿಗೆ ಸಕ್ಕರೆ ಸರಬರಾಜು ಮಾಡಿದ್ದಾನೆ. ಸೋಂಕಿತನ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಜೂನ್ 22 ರಂದು ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು.