ಸಾರಿಗೆ ಮುಷ್ಕರದ ಬಗ್ಗೆ ಗೊತ್ತಿರಲಿಲ್ಲ, ಆಟೋದವರು ಜಾಸ್ತಿ ಹಣ ಕೇಳ್ತಿದ್ದಾರೆ: ಮೆಜೆಸ್ಟಿಕ್ನಲ್ಲಿ ಪ್ರಯಾಣಿಕರ ಆಳಲು - ಸಾರಿಗೆ ನೌಕರರ ಮುಷ್ಕರ
🎬 Watch Now: Feature Video

ಬೆಂಗಳೂರು: ಗುವಾಟಿಯಿಂದ ಬೆಂಗಳೂರಿಗೆ ರೈಲು ಮೂಲಕ ಬೆಳಗ್ಗೆ 11 ಗಂಟೆಗೆ ಬಂದಿದ್ದೇವೆ. ಬಸ್ ಬಂದ್ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದು ಪ್ರಯಾಣಿಕ ಅಮೀರ್ ಹಂಝಾ ಅಲೀ ಎಂಬುವರು ಅಳಲು ತೋಡಿಕೊಂಡರು. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ದಂಡು ರೈಲ್ವೆ ನಿಲ್ದಾಣದಿಂದ ಮೆಜೆಸ್ಟಿಕ್ಗೆ ಆಟೋದವರು 300 ರೂ. ಪಡೆದರು. ಮೆಜೆಸ್ಟಿಕ್ನಿಂದ ಸಕಲೇಶಪುರಕ್ಕೆ ಒಬ್ಬರಿಗೆ 1,300 ರೂ. ಕೇಳ್ತಿದ್ದಾರೆ. ಸಾಮಾನ್ಯ ಬಸ್ ದರ 250 ರೂ. ಇದೆ. ಹಾಗಾಗಿ ಬೇಡ ಎಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದೇವೆ. ಈಗ ಖಾಸಗಿ ಬಸ್ನಲ್ಲಿ 350 ರೂ. ನೀಡಿ ಹೋಗಬೇಕಿದೆ ಎಂದರು.