ಕೊಪ್ಪಳ ಲಾಕ್ಡೌನ್: ಕಿರಾಣಿ ಅಂಗಡಿಗಳ ಮುಂದೆ ಅಂತರ ಕಾಯ್ದುಕೊಂಡು ಕ್ಯೂ ನಿಂತ ಜನ - ಸೋಷಿಯಲ್ ಡಿಸ್ಟೆನ್ಸ್ ಮೆಂಟೈನ್
🎬 Watch Now: Feature Video

ಕೊಪ್ಪಳ: ಯುಗಾದಿ ಹಬ್ಬವನ್ನು ಮನೆಯಲ್ಲಿಯೇ ಸರಳವಾಗಿ ಆಚರಿಸಲು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ. ಈ ಆದೇಶದ ಹಾಗೂ ಕೊರೊನಾ ಭೀತಿಯ ನಡುವೆಯೂ ಕೊಪ್ಪಳ ನಗರದ ಅಲ್ಲಲ್ಲಿ ಕೆಲವರು ಒಬ್ಬೊಬ್ಬರಾಗಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಇನ್ನು ಕೆಲವರು ತಮ್ಮ ಮನೆಯ ಅಕ್ಕಪಕ್ಕದವರಿಗೆ ಒಬ್ಬೊಬ್ಬರೇ ಹೋಗಿ ಬೇವು ಬೆಲ್ಲ ಹಂಚಿದರು. ಇನ್ನು ಕೆಲವೆಡೆ ಮನೆಯ ಮುಂದೆ ತರಕಾರಿ ಮಾರಾಟಕ್ಕೆ ಇಟ್ಟಿರುವುದು ಕಂಡು ಬರುತ್ತಿದೆ. ಇನ್ನು ಕೆಲವರು ಕಿರಾಣಿ ಅಂಗಡಿಗೆ ಬಂದು ಕಿರಾಣಿ ತೆಗೆದುಕೊಂಡು ಹೋಗ್ತಿದ್ದಾರೆ. ಕೆಲ ಮೆಡಿಕಲ್ ಶಾಪ್ಗಳ ಮುಂದೆ ಜನರು ಮೂರು ಅಡಿ ಅಂತರದಲ್ಲಿ ನಿಂತುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳೂತ್ತಿರುವ ದೃಶ್ಯ ಕಂಡು ಬರುತ್ತಿದೆ.