ಜಾತ್ರೆಯಲ್ಲೂ ಮೊಳಗಿತು ನಿಖಿಲ್ ಎಲ್ಲಿದ್ದೀಯಪ್ಪಾ ಡೈಲಾಗ್! - undefined
🎬 Watch Now: Feature Video
ಬೆಳಗಾವಿ: ಎಲ್ಲಿ ನೋಡಿದರೂ ನಿಖಿಲ್ ಎಲ್ಲಿದ್ದೀಯಪ್ಪಾ ಡೈಲಾಗ್ ಸಖತ್ ಟ್ರೋಲ್ ಆಗುತ್ತಿದ್ದು, ಕೇವಲ ಚುನಾವಣೆಗೆ ಸೀಮಿತವಾಗಿದ್ದ ಈ ಘೋಷಣೆ ಈಗ ಜಾತ್ರೆಗಳಿಗೂ ವಿಸ್ತರಿಸಿದೆ. ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ಜಾತ್ರೆಯ ರಥೋತ್ಸವ ವೇಳೆ ಕೆಲ ಯುವಕರು ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಘೋಷಣೆ ಕೂಗಿದ್ದಾರೆ. ಅದಕ್ಕೆ ಇಲ್ಲಿದ್ದೀನಪ್ಪ ಎಂದು ಮತ್ತೆ ಕೆಲ ಯುವಕರು ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.