370 ವಿಧಿ ಅಂದು ನೆಹರೂ ಮಾಡಿದ್ದು ತಪ್ಪಲ್ಲ: ಪೇಜಾವರ ಶ್ರೀ ವಾದ
🎬 Watch Now: Feature Video
ಮೈಸೂರು: ಜಮ್ಮು-ಕಾಶ್ಮೀರವನ್ನು ಅಂದು ದೇಶಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ 370 ನೇ ವಿಧಿಯನ್ನ ಸಂವಿಧಾನಕ್ಕೆ ಸೇರ್ಪಡೆ ಮಾಡುವ ಮೂಲಕ ವಿಶೇಷ ಸ್ಥಾನ ನೀಡಿದ್ದು ತಪ್ಪಲ್ಲ. ಅಂದು ಅನಿವಾರ್ಯ ಕೂಡಾ ಆಗಿತ್ತು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಜಮ್ಮು-ಕಾಶ್ಮೀರವನ್ನು ಅಂದು ಪಾಕಿಸ್ತಾನ ವಶಪಡಿಸಿಕೊಳ್ಳಲು ಪ್ರಯತ್ನ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೆಹರೂ ವಿಶೇಷ ಸ್ಥಾನ ನೀಡಿದರು. ಆದರೀಗ ಪ್ರಧಾನಿ ಮೋದಿ ಅವರು ವಿಶೇಷ ಸ್ಥಾನ ಸ್ಥಾನಮಾನ ತೆಗೆದು ಏಕತೆ ಸಾಧಿಸಿರುವುದು ಸ್ವಾಗತಾರ್ಹ ಎಂದರು.