ETV Bharat / bharat

ಗೋವಾದಲ್ಲಿ ಹಣದ ಬದಲಿಗೆ ಸರ್ಕಾರಿ ನೌಕರಿ ಹಗರಣ: ಸಿಬಿಐ ತನಿಖೆಗೆ ಆಪ್ ಒತ್ತಾಯ

ಗೋವಾದಲ್ಲಿ ನಡೆದಿದೆ ಎನ್ನಲಾದ ಸರ್ಕಾರಿ ನೌಕರಿ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಆಪ್ ಒತ್ತಾಯಿಸಿದೆ.

ಗೋವಾದಲ್ಲಿ ಹಣದ ಬದಲಿಗೆ ಸರ್ಕಾರಿ ನೌಕರಿ ಹಗರಣ: ಸಿಬಿಐ ತನಿಖೆಗೆ ಆಪ್ ಒತ್ತಾಯ
ಗೋವಾದಲ್ಲಿ ಹಣದ ಬದಲಿಗೆ ಸರ್ಕಾರಿ ನೌಕರಿ ಹಗರಣ: ಸಿಬಿಐ ತನಿಖೆಗೆ ಆಪ್ ಒತ್ತಾಯ (IANS)
author img

By PTI

Published : 2 hours ago

ಪಣಜಿ: ಗೋವಾದಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸಿದ ವಿವಿಧ ಪ್ರಕರಣಗಳ ಬಗ್ಗೆ ಸಿಬಿಐ ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ. ದಕ್ಷಿಣ ಗೋವಾದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಎಎಪಿ ಅಧ್ಯಕ್ಷ ಅಮಿತ್ ಪಾಲೇಕರ್, ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದರು.

ಹಗರಣದ ಬಗ್ಗೆ ಕೇಂದ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕು. ಸಿಬಿಐ ಅಲ್ಲದಿದ್ದರೆ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.

ಸಾಮಾನ್ಯ ಹಗರಣದಂತೆ ಕಾಣುತ್ತಿಲ್ಲ: "ಇದೊಂದು ಸಾಮಾನ್ಯ ಹಗರಣದಂತೆ ಕಾಣುತ್ತಿಲ್ಲವಾದ್ದರಿಂದ ಇಡೀ ಹಗರಣದಲ್ಲಿ ಒಳಗಿನವರ ಪಾತ್ರವೇನಿದೆ ಎಂಬ ಬಗ್ಗೆ ತನಿಖೆಯಾಗಬೇಕಿದೆ. ಇದೊಂದು ದೊಡ್ಡ ದಂಧೆಯ ರೀತಿ ಕಾಣುತ್ತಿದೆ" ಎಂದು ಆರೋಪಿಸಿದರು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಆಪ್ತರು ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳನ್ನು ಹಗರಣದ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.

ಹಗರಣ ಬಯಲಾದ ನಂತರ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಣಿ ದೂರುಗಳು ದಾಖಲಾಗುತ್ತಿದ್ದು, ಹಣದ ಬದಲಿಗೆ ಸರ್ಕಾರಿ ನೌಕರಿಯ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಗೋವಾ ಪೊಲೀಸರು 6ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಅಲ್ಲದೆ ಪೊಲೀಸರು ತನಿಖೆಗೊಳಪಡಿಸಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೆಲ್ಲ ನೋಡಿದರೆ ಹಗರಣವು ಆಳವಾಗಿ ಬೇರೂರಿದೆ ಎಂದು ಪಾಲೇಕರ್ ಹೇಳಿದ್ದಾರೆ. ಈ ಹಗರಣವು ಈಗ ಕೇವಲ ಹಣದ ವಿಚಾರವಾಗಿ ಉಳಿದಿಲ್ಲ, ಇದು ಜನರ ಜೀವಗಳನ್ನೂ ಬಲಿ ಪಡೆಯಲಾರಂಭಿಸಿರುವುದು ದುರಂತ ಎಂದು ಅವರು ಹೇಳಿದರು.

ಮೋಸ ಹೋದ ಜನ ಪೊಲೀಸರಿಗೆ ದೂರು ನೀಡಿ - ಸಿಎಂ ಮನವಿ: ಸರ್ಕಾರಿ ಉದ್ಯೋಗದ ಭರವಸೆಯಿಂದ ಮೋಸ ಹೋದ ಜನ ಪೊಲೀಸರಿಗೆ ದೂರು ನೀಡುವಂತೆ ಸಿಎಂ ಸಾವಂತ್ ಸೋಮವಾರ ಮನವಿ ಮಾಡಿದ್ದು, ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಹೇಳಿದರು.

ಸರ್ಕಾರಿ ಉದ್ಯೋಗದ ಭರವಸೆ ನೀಡಿ ಜನರನ್ನು ವಂಚಿಸಿದ ಆರೋಪದ ಮೇಲೆ ಪೂಜಾ ನಾಯಕ್ ಎಂಬ ಮಹಿಳೆಯನ್ನು ಕಳೆದ ತಿಂಗಳು ಗೋವಾದ ಪೊಂಡಾ ಪೊಲೀಸರು ಬಂಧಿಸಿದ್ದರು. ನೌಕರಿ ಹಗರಣದಲ್ಲಿ ಆಕೆಗೆ ಸಹಾಯ ಮಾಡಿದ ಇಬ್ಬರು ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಾವಂತ್ ಹೇಳಿದ್ದರು.

ವ್ಯಕ್ತಿಯೊಬ್ಬರ ಮಕ್ಕಳಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ 20 ಲಕ್ಷ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಮಹಿಳೆಯೊಬ್ಬಳನ್ನು ಗೋವಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಇದನ್ನೂ ಓದಿ : 370ನೇ ವಿಧಿ ಮರುಸ್ಥಾಪನೆ ಕೋರಿ ಜಮ್ಮು & ಕಾಶ್ಮೀರ ವಿಧಾನಸಭೆ ನಿರ್ಣಯ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.