ETV Bharat / business

ಅಮೆರಿಕ ಚುನಾವಣೆಯಲ್ಲಿ ಟ್ರಂಪ್​ ಗೆಲುವಿನ ಸುದ್ದಿ:ಡಾಲರ್​ ವಿರುದ್ಧ ಇರಾನ್ ಕರೆನ್ಸಿ ಸಾರ್ವಕಾಲಿಕ ಕನಿಷ್ಠಕ್ಕೆ ಕುಸಿತ

ಡಾಲರ್​ ವಿರುದ್ಧ ಇರಾನ್​​​ ಕರೆನ್ಸಿ ರಿಯಾಲ್​ 703,000 ಮೌಲ್ಯದಲ್ಲಿ ವ್ಯವಹಾರ ನಡೆಸುತ್ತಿದೆ ಎಂದು ಟೆಹ್ರಾನ್‌ನ ವ್ಯಾಪಾರಿಗಳು ತಿಳಿಸಿದ್ದಾರೆ. ಈ ದರ ಮತ್ತೆ ಬದಲಾಗಬಹುದು.

iran-currency-falls-to-all-time-low-as-donald-trump-wins-us-election-2024-result-update
ಅಮೆರಿಕ ಚುನಾವಣೆಯಲ್ಲಿ ಟ್ರಂಪ್​ ಗೆಲುವಿನ ಸುದ್ದಿ: ಇರಾನ್ ಕರೆನ್ಸಿ ಸಾರ್ವಕಾಲಿಕ ಕನಿಷ್ಠಕ್ಕೆ ಕುಸಿತ (AP)
author img

By ETV Bharat Karnataka Team

Published : 3 hours ago

ಟೆಹರಾನ್, ಇರಾನ್​: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗುವ ಫಲಿತಾಂಶಗಳು ಬರುತ್ತಿವೆ. ಹಲವು ಸವಾಲುಗಳ ನಡುವೆ ಡೊನಾಲ್ಡ್​ ಟ್ರಂಪ್​​​, ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಅಂಚಿನಲ್ಲಿದ್ದಾರೆ. ಈ ನಡುವೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಗಳಲ್ಲಿ ಸಿಲುಕಿರುವ ಟೆಹ್ರಾನ್‌ಗೆ ಹೊಸ ಸವಾಲುಗಳು ಎದುರಾಗಿವೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಫಲಿತಾಂಶಗಳು ಹೊರ ಬೀಳುತ್ತಿದ್ದಂತೆ ಇರಾನ್‌ನ ಕರೆನ್ಸಿ ಬುಧವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ರಿಯಾಲ್ ಡಾಲರ್‌ಗೆ 703,000 ರಿಯಾಲ್‌ಗಳಲ್ಲಿ ವಹಿವಾಟು ನಡೆಸುತ್ತಿದೆ ಎಂದು ಟೆಹ್ರಾನ್‌ನ ವ್ಯಾಪಾರಿಗಳು ತಿಳಿಸಿದ್ದಾರೆ.ಈ ದರ ಇನ್ನೂ ಬದಲಾಗಬಹುದು. ಇರಾನ್‌ನ ಸೆಂಟ್ರಲ್ ಬ್ಯಾಂಕ್ ಈ ಹಿಂದೆ ಮಾಡಿದಂತೆ ದರವನ್ನು ಸುಧಾರಿಸುವ ಪ್ರಯತ್ನದಲ್ಲಿ ಹೆಚ್ಚು ಕರೆನ್ಸಿಗಳೊಂದಿಗೆ ಮಾರುಕಟ್ಟೆಯಲ್ಲಿ ಪ್ರವಾಹ ಮಾಡಬಹುದು ಎಂದು ಹೇಳಲಾಗುತ್ತಿದೆ. ರಿಯಾಲ್ ಮೌಲ್ಯದಲ್ಲಿ ತೀಕ್ಷ್ಣವಾದ ಕುಸಿತ ಕಂಡು ಬರುತ್ತಿದೆ.

2015 ರಲ್ಲಿ ವಿಶ್ವದ ಶಕ್ತಿಶಾಲಿ ದೇಶಗಳನ್ನು ಇರಾನ್​ ಎದುರು ಹಾಕಿಕೊಂಡಾಗಲು ಇರಾನ್​​ನ ರಿಯಾಲ್ ಒಂದು ಡಾಲರ್​​ಗೆ 32,000 ರಷ್ಟಿತ್ತು. ಜುಲೈ 30 ರಂದು ಇರಾನ್‌ನ ಸುಧಾರಣಾವಾದಿ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಪ್ರಮಾಣ ವಚನ ಸ್ವೀಕರಿಸಿದ ದಿನ ಡಾಲರ್​ ವಿರುದ್ಧ ರಿಯಾಲ್​ ಮೌಲ್ಯ 584,000 ಆಗಿತ್ತು. 2018 ರಲ್ಲಿ ಡೊನಾಲ್ಡ್​ ಟ್ರಂಪ್​ ಇರಾನ್​​ ಜತೆಗಿನ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿದಿದ್ದರು. ಇದು ಇಂದಿಗೂ ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಮುಂದುವರೆಸಿಕೊಂಡು ಬರುವಂತೆ ಮಾಡಿದೆ.

ಇರಾನ್‌ನ ಆರ್ಥಿಕತೆಯು ಅಂತಾರಾಷ್ಟ್ರೀಯ ನಿರ್ಬಂಧಗಳ ಅಡಿ ಮುಂದುವರೆಯುತ್ತಿದೆ. ಮೇ ತಿಂಗಳಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತಪಟ್ಟ ನಂತರ ಆಯ್ಕೆಯಾದ ಪೆಜೆಶ್ಕಿಯಾನ್, ಪಾಶ್ಚಿಮಾತ್ಯ ನಿರ್ಬಂಧಗಳನ್ನು ಸರಾಗಗೊಳಿಸುವ ಒಪ್ಪಂದವನ್ನು ಮಾಡಿಕೊಳ್ಳುವ ಭರವಸೆಯ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಆದಾಗ್ಯೂ, ಇರಾನ್‌ನ ಸರ್ಕಾರವು ಅಮೆರಿಕದ ಚುನಾವಣೆಯಲ್ಲಿ ಗೆದ್ದವರ ಜೊತೆ ಸಂಬಂಧ ಗಟ್ಟಿಗಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವ ಹುಮ್ಮಸ್ಸಿನಲ್ಲಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯು ನಮ್ಮೊಂದಿಗೆ ನಿರ್ದಿಷ್ಟವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇರಾನ್​ ಹೇಳಿದೆ. "ಅಮೆರಿಕ ಮತ್ತು ಇಸ್ಲಾಮಿಕ್ ರಿಪಬ್ಲಿಕ್ನ ಪ್ರಮುಖ ನೀತಿಗಳು ಸ್ಥಿರವಾಗಿವೆ ಮತ್ತು ಇತರರನ್ನು ಬದಲಿಸುವ ಮೂಲಕ ಅವುಗಳು ಹೆಚ್ಚು ಬದಲಾಗುವುದಿಲ್ಲ. ನಾವು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮುಂಚಿತವಾಗಿ ಮಾಡಿಕೊಂಡಿದ್ದೇವೆ ಎಂದು ಅಲ್ಲಿನ ಅಧ್ಯಕ್ಷರು ಹೇಳಿದ್ದಾರೆ.

1979 ಅಮೆರಿಕ ರಾಯಭಾರ ಕಚೇರಿಯನ್ನು ಸ್ವಾಧೀನಪಡಿಸಿಕೊಂಡ 45 ವರ್ಷಗಳ ನಂತರ ಮತ್ತು ಆ ಬಳಿಕದ 444-ದಿನಗಳ ಒತ್ತೆಯಾಳು ಬಿಕ್ಕಟ್ಟಿನ ನಂತರ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಇರಾನ್ ಉಗ್ರಗಾಮಿ ಗುಂಪುಗಳು ಮತ್ತು "ಆಕ್ಸಿಸ್ ಆಫ್ ರೆಸಿಸ್ಟೆನ್ಸ್" ನ ಹೋರಾಟಗಾರರು, ಪ್ಯಾಲೇಸ್ಟಿನಿಯನ್ ಹಮಾಸ್, ಲೆಬನಾನ್‌ನ ಹೆಜ್ಬುಲ್ಲಾ ಮತ್ತು ಯೆಮೆನ್‌ನ ಹೌತಿ ಬಂಡುಕೋರರೊಂದಿಗೆ ಹೆಚ್ಚಿನ ಸಂಬಂಧ ಹೊಂದಿದೆ. ಇದು ಇರಾನ್​ ಮೇಲೆ ಭಾರಿ ಪ್ರಭಾವ ಬೀರುವ ಸಾಧ್ಯತೆ ಇದೆ.

ಅತ್ತ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಹಮಾಸ್ ಮತ್ತು ಲೆಬನಾನ್‌ನಲ್ಲಿ ಹಿಜ್ಬುಲ್ಲಾಗಳನ್ನು ಗುರಿಯಾಗಿಸಿಕೊಂಡು ಆಕ್ರಮಣಕಾರಿ ದಾಳಿಗಳನ್ನು ನಡೆಸುತ್ತಿದೆ. ಅದೇ ಸಮಯದಲ್ಲಿ ಇರಾನ್ ಇಸ್ರೇಲ್​ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಬೆದರಿಕೆ ಹಾಕಿದೆ. ಈ ನಡುವೆ ಅಮೆರಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನು ಇಸ್ರೇಲ್​ಗೆ ರವಾನಿಸಿದೆ.

ಇದನ್ನು ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ: ಐತಿಹಾಸಿಕ ಗೆಲುವಿನತ್ತ ಡೊನಾಲ್ಡ್‌ ಟ್ರಂಪ್‌!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.