ETV Bharat / entertainment

Watch: ಸಲ್ಮಾನ್ ಖಾನ್ 'ಸಿಕಂದರ್' ಸೆಟ್‌ನಿಂದ ವಿಡಿಯೋ ಲೀಕ್​​: ರಶ್ಮಿಕಾ ಮಂದಣ್ಣ ಲುಕ್​​ ರಿವೀಲ್​​ - SIKANDAR GLIMPSE

ಸಲ್ಮಾನ್​ ಖಾನ್​ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಮುಂದಿನ ಬಹುನಿರೀಕ್ಷಿತ 'ಸಿಕಂದರ್' ಸಿನಿಮಾದ ಶೂಟಿಂಗ್​ ಸೆಟ್​ನಿಂದ ವಿಡಿಯೋಗಳು ಲೀಕ್​ ಆಗಿವೆ.

Salman Khan - Rashmika Mandanna
ಸಲ್ಮಾನ್​ ಖಾನ್​, ರಶ್ಮಿಕಾ ಮಂದಣ್ಣ (ANI)
author img

By ETV Bharat Entertainment Team

Published : Nov 6, 2024, 4:15 PM IST

ಬಾಲಿವುಡ್​​ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೆಶನದ 'ಸಿಂಗಮ್ ಎಗೈನ್​​​' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟನ ಮುಂದಿನ ಬಹುನಿರೀಕ್ಷಿತ ಚಿತ್ರ 'ಸಿಕಂದರ್'. 2025ರಲ್ಲಿ ಬಿಡುಗಡೆ ಆಗಲಿರುವ ಸಿನಿಮಾದ ಶೂಟಿಂಗ್ ಸಾಗಿದೆ. ನ್ಯಾಶನಲ್​ ಕ್ರಶ್​ ಖ್ಯಾತಿಯ ರಶ್ಮಿಕಾ ಮಂದಣ್ಣ ಚಿತ್ರದ ನಾಯಕ ನಟಿ ಅನ್ನೋದು ಗಮನಾರ್ಹ ಸಂಗತಿ. ಇತ್ತೀಚೆಗೆ, ಸಿಕಂದರ್ ಸೆಟ್‌ನಿಂದ ವಿಡಿಯೋ ಒಂದು ಸೋರಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಸಿನಿಮಾ ನೋಡುವ ಕಾತರ ಹೆಚ್ಚಿದೆ.

'ಸಿಕಂದರ್' ಸೆಟ್‌ನಿಂದ ಲೀಕ್​ ಆಗಿರುವ ವಿಡಿಯೋದಲ್ಲಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಒಂದು ನೋಟ ಲಭ್ಯವಾಗಿದೆ. ವೈರಲ್​ ವಿಡಿಯೋದಲ್ಲಿ ಕಿರಿಕ್​ ಪಾರ್ಟಿ ನಟಿ ಮಾನಿಟರ್ ಸ್ಕ್ರೀನ್​​ ಮೇಲೆ ಕಾಣಿಸಿಕೊಂಡರೆ, ಸಲ್ಮಾನ್ ಖಾನ್ ತಂಡವು ಶೂಟಿಂಗ್ ಸ್ಪಾಟ್​ಗೆ ಆಗಮಿಸುತ್ತಿರುವುದನ್ನು ಕಾಣಬಹುದು. ಇದಲ್ಲದೇ, ಸೆಟ್‌ನ ಮತ್ತೊಂದು ವಿಡಿಯೋ ಕೂಡಾ ವೈರಲ್ ಆಗಿದೆ. ಇದರಲ್ಲಿ ಕಾರು ಮತ್ತು ಬಂಗಲೆ ಗೋಚರಿಸಿದೆ. ಅದಾಗ್ಯೂ, ಸಲ್ಮಾನ್​ ಲುಕ್​​ ಈ ವಿಡಿಯೋಗಳಲ್ಲಿ ಕಂಡುಬಂದಿಲ್ಲ.

ಲಾರೆನ್ಸ್ ಬಿಷ್ಣೋಯ್ ತಂಡದ ನಿರಂತರ ಬೆದರಿಕೆಗಳ ನಡುವೆಯೂ ಭಾಯ್​ಜಾನ್​​ ಹೆಚ್ಚಿನ ಭದ್ರತೆಯೊಂದಿಗೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಕೆಲಸಕ್ಕೆ ಬದ್ಧರಾಗಿ, ಇತರರಿಗೆ ಪ್ರೇರಣೆಯಾಗಿದ್ದಾರೆ. ಒಂದೆಡೆ ಬಿಗಿ ಭದ್ರತೆಯೊಂದಿಗೆ ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ 18'ರ ಶೂಟಿಂಗ್​ನಲ್ಲಿ ಭಾಗಿಯಾಗುತ್ತಿದ್ದರೆ, ಮತ್ತೊಂದೆಡೆ ಸಿಕಂದರ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ವರದಿಗಳ ಪ್ರಕಾರ, ಸಿಕಂದರ್ ಸೆಟ್‌ನಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ.

ಇದನ್ನೂ ಓದಿ: ಕಾಂತಾರ ಸೆಟ್​ನಲ್ಲಿ ರಿಷಬ್​ ಶೆಟ್ಟಿ: 60 ದಿನಗಳ ನಿರಂತರ ಶೂಟಿಂಗ್​; 2 ಶೆಡ್ಯೂಲ್​ ಕಂಪ್ಲೀಟ್, ಬಜೆಟ್​ ಮಾಹಿತಿ ಇಲ್ಲಿದೆ​​

ಅಮೀರ್ ಖಾನ್ ನಟನೆಯ ಸೂಪರ್​ ಹಿಟ್ 'ಗಜನಿ' ಚಿತ್ರ ಖ್ಯಾತಿಯ ಸೌತ್​​ನ ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನದಲ್ಲಿ 'ಸಿಕಂದರ್ ಮೂಡಿಬರುತ್ತಿದೆ. ಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ಅವರ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಿಸಲಾಗುತ್ತಿದೆ. ಸಲ್ಮಾನ್ ಖಾನ್ ಜೊತೆಗೆ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿದ್ದು, ಕಾಜಲ್ ಅಗರ್ವಾಲ್, ಸುನೀಲ್ ಶೆಟ್ಟಿ, ಶರ್ಮಾನ್ ಜೋಶಿ, ಅಂಜಿನಿ ಧವನ್, ಪ್ರತೀಕ್ ಬಬ್ಬರ್ ಮತ್ತು ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈದ್ ಉಡುಗೊರೆಯಾಗಿ 2025ರ ಮಾರ್ಚ್​​ 30 ರಂದು ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: 'ರಾಮಾಯಣ'ದಲ್ಲಿ ಯಶ್​, ಸಾಯಿಪಲ್ಲವಿ, ರಣ್​​​ಬೀರ್​ ನಟನೆ ಖಚಿತ: ಬಿಡುಗಡೆಗೂ ಮುಹೂರ್ತ ಫಿಕ್ಸ್

ಸಲ್ಮಾನ್ ಖಾನ್ ಸ್ನೇಹಿತ, ರಾಜಕಾರಣಿ ಬಾಬಾ ಸಿದ್ದಿಕಿ ಅವರನ್ನು ಇದೇ ಸಾಲಿನ ಅಕ್ಟೋಬರ್ 12 ರಂದು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು. ಈ ಹತ್ಯೆಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್​ ವಹಿಸಿಕೊಂಡಿದ್ದು, ನಂತರ ಸಲ್ಮಾನ್ ಖಾನ್‌ಗೆ ಸಹಾಯ ಮಾಡುವವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಸಲ್ಮಾನ್ ಖಾನ್ ಅವರಿಗೂ ಹತ್ಯೆ ಬೆದರಿಕೆ ಬಂದಿದ್ದು, ಅವರಿಗೆ ವೈ-ಪ್ಲಸ್ ಭದ್ರತೆಯನ್ನು ನೀಡಲಾಗುತ್ತಿದೆ. ಇತ್ತೀಚಿನ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಾಗಿ ಹುಬ್ಬಳ್ಳಿಯಲ್ಲಿ ಮುಂಬೈ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.