ರಾಜ್ಯೋತ್ಸವದ ಸಂಭ್ರಮದಲ್ಲಿ 'ಕಾಂತಾರ' ಸಂಭ್ರಮ: ಶಾಸಕ ರೆಡ್ಡಿ ನಗದು ಬಹುಮಾನ - KANTARA MOVIE STILL FILM
🎬 Watch Now: Feature Video
Published : Nov 2, 2024, 7:20 AM IST
ಗಂಗಾವತಿ: ತುಳುನಾಡಿನ ದೈವರಾಧನೆಯನ್ನೇ ಪ್ರಧಾನ ವಸ್ತುವಾಗಿಸಿಕೊಂಡು ತೆರೆಗೆ ಬಂದ, ಕನ್ನಡ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಕಾಂತಾರ ಸಿನಿಮಾದ ದೃಶ್ಯಗಳು ಶುಕ್ರವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮರುಕಳಿಸಿದವು.
ಕನಕಗಿರಿ ರಸ್ತೆಯಲ್ಲಿರುವ ಚನ್ನಬಸವಸ್ವಾಮಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಧ್ವಜಾರೋಹಣದ ಬಳಿಕ ನಡೆದ ವಿವಿಧ ಶಾಲಾ ಮಕ್ಕಳ ಸ್ತಬ್ಧಚಿತ್ರಗಳ ಮೆರವಣಿಗೆ ಆಕರ್ಷಣೀಯವಾಗಿತ್ತು. ಮಕ್ಕಳು ಮಾಡಿದ ಮನೋಘ್ನ ಅಭಿನಯ ಹಾಗೂ ಕನ್ನಡದ ಹಾಡಿನ ನೃತ್ಯಕ್ಕೆ ಮನಸೋತು ಮರುಳಾದ ಶಾಸಕ ಜಿ. ಜನಾರ್ದನರೆಡ್ಡಿ, ವೇದಿಕೆಯಲ್ಲಿಯೇ ನಗದು ಬಹುಮಾನ ಘೋಷಣೆ ಮಾಡಿದರು.
ಪ್ರಥಮ, ದ್ವಿತೀಯ, ತೃತೀಯ ಹಾಗೂ ಎರಡು ಸಮಾಧಾನಕರ ಸ್ಥಾನಕ್ಕೆ ಒಟ್ಟು 80 ಸಾವಿರ ಮೊತ್ತದ ನಗದು ಬಹುಮಾನ ಘೋಷಣೆ ಮಾಡಿ ಸ್ಥಳದಲ್ಲಿಯೇ ಮಕ್ಕಳಿಗೆ ವಿತರಿಸಿದರು. ಸ್ತಬ್ದ ಚಿತ್ರಗಳ ವಿಭಾಗದಲ್ಲಿ ಕಾಂತಾರ ಚಿತ್ರದ ದೃಶ್ಯಗಳನ್ನು ಹೋಲುವ ದೈವರಾಧನೆಯ ದೃಶ್ಯವನ್ನು ಮತ್ತೊಮ್ಮೆ ಕಣ್ಣಿಗೆ ಕಟ್ಟುವಂತೆ ಮಕ್ಕಳು ಕಟ್ಟಿಕೊಟ್ಟರು. ನಾಡಿನ ಹೆಸರಾಂತ ಹುಲಿ ಕುಣಿತ, ಕನ್ನಡ ನಾಡಿನ ಕವಿಗಳ ವೇಷಭೂಷಣ, ಕನ್ನಡ ನಾಡಿನ ವೀರ ಹೋರಾಟಗಾರರ ವೇಷ ತೊಟ್ಟ ಮಕ್ಕಳು ಗಮನ ಸೆಳೆದರು.
ವಿಜೇತರ ವಿವರ: ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ ಬಿಂಬಿಸುವ ಜಾನಪದ ನೃತ್ಯದ ವಿಭಾಗದಲ್ಲಿ ಹಿರೇಜಂತಕಲ್ನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಬಹುಮಾನ 25 ಸಾವಿರ ನಗದು, ಆರೋನ್ ಮಿರಾಜ್ಕರ್ ಇಂಗ್ಲೀಷ್ ಮೀಡಿಯಂ ಶಾಲೆಗೆ ದ್ವಿತೀಯ ಬಹುಮಾನ 20 ಸಾವಿರ ನಗದು ಬಹುಮಾನ ನೀಡಲಾಯಿತು.
ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ಉತ್ಪಾದಿಸುವ ವಸ್ತುಗಳ ಮೇಲೆ ಕನ್ನಡ ಸೇರ್ಪಡೆ - ಸಿಎಂ ಘೋಷಣೆ