ಸಂಕಷ್ಟದ ಸ್ಥಿತಿಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ: ಈಟಿವಿ ಭಾರತ ರಿಯಾಲಿಟಿ ಚೆಕ್ನಲ್ಲಿ ಬಯಲು - Peenya Industrial area Hub Hit,
🎬 Watch Now: Feature Video
ಬೆಂಗಳೂರಿನ ಪೀಣ್ಯ ಪ್ರದೇಶ, ಆಗ್ನೇಯ ಏಷ್ಯಾ ಖಂಡದಲ್ಲೇ ಅತಿದೊಡ್ಡ ಕೈಗಾರಿಕಾ ಪ್ರದೇಶ ಎಂದೇ ಹೆಸರುವಾಸಿ. ನಾಲ್ಕು ಸಾವಿರಕ್ಕೂ ಅಧಿಕ ಕೈಗಾರಿಕಾ ಸಂಸ್ಥೆಗಳನ್ನು ಹೊಂದಿರುವ ಪೀಣ್ಯ ಸಂಕಷ್ಟದ ಸ್ಥಿತಿಯಲ್ಲಿದೆ. ಈ ಕೈಗಾರಿಕಾ ಪ್ರದೇಶದ ಲಕ್ಷಾಂತರ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶ್ವ ಹಾಗೂ ಭಾರತದ ಆರ್ಥಿಕ ಹಿಂಜರಿತದಿಂದ ಇಲ್ಲಿನ ಕೈಗಾರಿಕೆಗಳು ತತ್ತರಿಸಿ ಹೋಗಿವೆ. ಆಟೋಮೊಬೈಲ್ ಕ್ಷೇತ್ರದ ಉತ್ಪಾದನೆ ಕುಸಿದಿರುವ ಕಾರಣ ಸಾವಿರಾರು ಕಂಪನಿಗಳು ಬಾಗಿಲು ಮುಚ್ಚುವ ಆತಂಕದಲ್ಲಿದೆ. ಇದರ ಬಗ್ಗೆ ಈಟಿವಿ ಭಾರತದ ರಿಯಾಲಿಟಿ ಚೆಕ್ನಲ್ಲಿ ಈ ಅಂಶ ಬಯಲಾಗಿದೆ.