ಶೇಂಗಾ ಬಣವೆಗೆ ಕೊಳ್ಳಿಯಿಟ್ಟ ಕಿಡಿಗೇಡಿಗಳು: ಸುಟ್ಟು ಕರಕಲಾದ ಬೆಳೆ - ಹುಬ್ಬಳ್ಳಿ ಸುದ್ದಿ ಶೇಂಗಾ ಬಣವೆಗೆ ಬೆಂಕಿ
🎬 Watch Now: Feature Video

ಹುಬ್ಬಳ್ಳಿ: ಶೇಂಗಾ ಬಣವೆಗೆ ಕಿಡಗೇಡಿಗಳು ಬೆಂಕಿ ಹಚ್ಚಿದ ಘಟನೆ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ನಡೆದಿದೆ. ಪಕೀರಪ್ಪ ಬಸಪ್ಪ ಹರಕುಣಿ ಎಂಬುವರಿಗೆ ಸೇರಿದ 8 ಎಕರೆ ಜಮೀನಿನ ಶೇಂಗಾ ಬಣವೆಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಶೇಂಗಾ ಬೆಂಕಿಗಾಹುತಿಯಾಗಿದೆ. ಬೆಂಕಿಯನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕ ಸಿಬ್ಬಂದಿ ಆಗಮಿಸುವುದರೊಳಗೆ ಬಣವೆ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.