ಪಾರ್ಕಿಂಗ್ ವಿಚಾರಕ್ಕೆ ಟ್ರ್ಯಾಕ್ಟರ್ ಮಾಲೀಕನ ಮೇಲೆ ಇಟ್ಟಿಗೆಯಿಂದ ಹಲ್ಲೆ - ಯಾದಗಿರಿ ಸುದ್ದಿ

🎬 Watch Now: Feature Video

thumbnail

By

Published : Nov 21, 2019, 5:00 PM IST

ಯಾದಗಿರಿ: ಟ್ರ್ಯಾಕ್ಟರ್ ಪಾರ್ಕಿಂಗ್ ವಿಚಾರವಾಗಿ ಪೆಟ್ರೋಲ್ ಬಂಕ್​ನ ವಾಚ್​ಮನ್​ನ ಪುತ್ರ ಟ್ರ್ಯಾಕ್ಟರ್​ ಮಾಲೀಕನ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ನಗರದ ಹೊರಭಾಗದ ಶುಭಂ ಪೆಟ್ರೋಲ್​ ಬಂಕ್​ನಲ್ಲಿ ಘಟನೆ ನಡೆದಿದ್ದು, ಬಂಕ್​ನ ವಾಚ್​ಮನ್ ಮಲ್ಲಪ್ಪ ಎಂಬುವವರ ಪುತ್ರ ಮಾಳಪ್ಪ ಬಂಕ್​ನ ಒಳಗಡೆ ಟ್ರ್ಯಾಕ್ಟರ್​ ಪಾರ್ಕಿಂಗ್ ಮಾಡಿದ್ದ ಮುಂಡರಗಿ ತಾಂಡಾದ ನಿವಾಸಿ ಮಲ್ಲು ಎಂಬಾತನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು, ಆರೋಪಿ ಮಾಳಪ್ಪನಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.