ನಿರಾಶ್ರಿತರಿಗೆ ಮತ್ತೆ ಗಾಯದ ಮೇಲೆ ಬರೆ: ಬೇರೆಡೆ ಸ್ಥಳಾಂತರವಾಗಲು ಪಂಚಾಯತ್​ನಿಂದ ನೋಟಿಸ್​​​! - panchayath notice to homless people

🎬 Watch Now: Feature Video

thumbnail

By

Published : Jun 12, 2020, 5:41 PM IST

2018ರಿಂದ ಸತತವಾಗಿ ಸುರಿದ ಮಳೆಗೆ ಉಂಟಾದ ಕಾವೇರಿ ಪ್ರವಾಹದಿಂದ ಸಾವಿರಾರು ಮಂದಿ ಆಸ್ತಿ, ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾದರು. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಂಬಾರಗುಂಡಿ, ಬೆಟ್ಟದಕಾಡು ಹಾಗೆಯೇ ನೆಲ್ಯಹುದಿಕೇರಿ ಗ್ರಾಮದ ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿತ್ತು. ಪ್ರತೀ ವರ್ಷ ಸಂಕಷ್ಟ ಅನುಭವಿಸುತ್ತಿದ್ದ ನಿವಾಸಿಗಳಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ಕೊಡುವುದಾಗಿ ಸರ್ಕಾರ ಹಾಗೂ ‌ಜಿಲ್ಲಾಡಳಿತ ಭರವಸೆ ನೀಡಿದ್ದವು. ಆದರೆ ಮಳೆಗಾಲ ಪ್ರಾರಂಭವಾಗಿರುವುದರಿಂದ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಗ್ರಾಮ ಪಂಚಾಯತ್​ ಮೂಲಕ ನೋಟಿಸ್ ನೀಡಲಾಗಿದೆ. ಈ ಕ್ರಮದಿಂದ ಅಸಮಾಧಾನಗೊಂಡಿರುವ ನಿವಾಸಿಗಳು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವವರೆಗೆ ನಾವು ಇಲ್ಲಿಂದ ಎಲ್ಲಿಗೆ ಹೋಗುವುದು ಎಂದು ನೆಲ್ಯಹುದಿಕೇರಿಯ ಗ್ರಾಮ ಪಂಚಾಯತ್​ಗೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ನಿವಾಸಿಗಳು ಈಟಿವಿ ಭಾರತದ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.