ಕಲ್ಪತರು ನಾಡಲ್ಲಿ ಮತ್ತೆ ಕೊರೊನಾ ಪತ್ತೆ: ತುಮಕೂರಲ್ಲಿ ಡ್ರೋನ್ ಕಣ್ಗಾವಲು - ಕೊರೊನಾ ವೈರಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6932063-thumbnail-3x2-tmk.jpg)
ತುಮಕೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಸೋಂಕಿತ ವ್ಯಕ್ತಿ ವಾಸವಿದ್ದ ಪಿ. ಹೆಚ್. ಕಾಲೊನಿಯನ್ನು “ಕಂಟೇನ್ಮೆಂಟ್ ವಲಯ” ವೆಂದು ಪರಿಗಣಿಸಿ ಸೀಲ್ ಡೌನ್ ಮಾಡಲಾಗಿದೆ. ಯಾರೊಬ್ಬರೂ ಮನೆಯಿಂದ ಹೊರಬರದಂತೆ ಕಟ್ಟಾಜ್ಞೆ ಹೊರಡಿಸಲಾಗಿದೆ. ಅಲ್ಲದೆ ಡ್ರೋನ್ ಕ್ಯಾಮರಾ ಮೂಲಕವೂ ಹೊರಗೆ ತಿರುಗುವ ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಕಾಲೋನಿಯ ಒಳ ಹೋಗಲು ಮತ್ತು ಹೊರಬರಲು ಒಂದೇ ಪ್ರವೇಶ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.