ಚಾರ್ಮಡಿ ಪ್ರವಾಹ ವೀಕ್ಷಿಸಿದ ಸಚಿವ ಮಾಧುಸ್ವಾಮಿ... ಮಣ್ಣಲ್ಲಿ ಸಿಕ್ಕಿಹಾಕಿಕೊಂಡ ಎಂಜಿನಿಯರ್ ಕಾರು - ಮಂಗಳೂರಿನ ಪ್ರವಾಹ ಪೀಡಿತ ಸ್ಥಳದಲ್ಲಿ ಸಿಕ್ಕಿ ಹಾಕಿಕೊಂಡ ಕಾರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4875485-thumbnail-3x2-mgl.jpg)
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಡಿಯಲ್ಲಿ ಪ್ರವಾಹ ಹಾನಿಯನ್ನು ವೀಕ್ಷಿಸಲು ಬಂದ ಸಚಿವ ಮಾಧುಸ್ವಾಮಿ ಜೊತೆಗಿದ್ದ ಎಂಜಿಯರ್ ಕಾರು ಮಣ್ಣಲ್ಲಿ ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ. ರಾಜ್ಯ ಕಾನೂನು ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಅವರು ಇಂದು (ಅ.26) ಬೆಳ್ತಂಗಡಿಗೆ ಭೇಟಿ ನೀಡಿ, ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರ ದರ್ಶನ ನಂತರ, ಪ್ರವಾಹ ಪೀಡಿತ ಚಾರ್ಮಾಡಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅರಣಪಾದೆ ಎಂಬಲ್ಲಿ ಸಚಿವರ ಜೊತೆಗೆ ಬಂದಿದ್ದ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕಾರು ಮಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಕಾರನ್ನು ಹಿಂದಕ್ಕೆ ತೆಗೆದುಕೊಂಡ ವೇಳೆ ಕಾರಿನ ಚಕ್ರ ಮಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡಿತು. ಬಳಿಕ ಬೆಳ್ತಂಗಡಿ ತಹಸೀಲ್ದಾರ್ ಗಣಪತಿ ಶಾಸ್ತ್ರಿ ಸೇರಿದಂತೆ ಸ್ಥಳೀಯರು ಕಾರನ್ನು ದೂಡಿ ಮೇಲಕ್ಕೆತ್ತಿದ್ದಾರೆ.