ಹೆಲ್ಮೆಟ್ ಹಾಕಿಲ್ಲ ಅಂದ್ರೆ ಪೆಟ್ರೋಲ್ ಸಿಗಲ್ಲ: ಬಾಗಲಕೋಟೆ ಪೊಲೀಸರ ಹೊಸ ನಿಯಮ - ಪೆಟ್ರೋಲ್ ಬಂಕ್ ಮಾಲೀಕರ ಸಹಕಾರ
🎬 Watch Now: Feature Video
ಬಾಗಲಕೋಟೆ: ಹೆಲ್ಮೆಟ್ ಹಾಕಿಲ್ಲ ಅಂದ್ರೆ ಪೆಟ್ರೋಲ್ ಹಾಕಲ್ಲ. ಈ ಮೂಲಕ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿ, ಕಡ್ಡಾಯವಾಗಿ ಹೆಲ್ಮೆಟ್ ಹಾಕುವಂತೆ ಮಾಡಿ ಬಾಗಲಕೋಟೆ ಪೊಲೀಸರು ಗಮನ ಸೆಳೆದಿದ್ದಾರೆ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ಜಾರಿಗೆ ತಂದ ನಂತರ ಕಾನೂನು ಉಲ್ಲಂಘಿಸಿದವರಿಗೆ ಹೆಚ್ಚಿನ ಹಣ ಹಾಕಿ ದಂಡ ವಸೂಲಿ ಮಾಡಲು ಮುಂದಾಗುವ ಬದಲು, ಪೊಲೀಸ್ ಇಲಾಖೆ ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಸಹಕಾರದಿಂದ ಹೆಲ್ಮೆಟ್ ಹಾಕಿದರೆ ಮಾತ್ರ ಪೆಟ್ರೋಲ್ ಹಾಕಲಾಗುವದು ಎಂದು ಬ್ಯಾನರ್ ಬರೆಯಿಸಲಾಗಿದೆ. ಇದನ್ನು ಕಡ್ಡಾಯ ಮಾಡುವ ಮೂಲಕ ಹೆಲ್ಮೆಟ್ ಹಾಕುವಂತೆ ಮಾಡುತ್ತಿದ್ದಾರೆ.