ಹುಬ್ಬಳ್ಳಿಯಲ್ಲಿ ಲಾಕ್ಡೌನ್ಗೆ ಡೋಂಟ್ ಕೇರ್: ಸೋಂಕು ಬಾಧಿತ ಪ್ರದೇಶದಲ್ಲಿ ಜನರ ಬಿಂದಾಸ್ ಸಂಚಾರ! - Corona in hubli
🎬 Watch Now: Feature Video
ಹುಬ್ಬಳ್ಳಿ: ಕೊರೊನಾ ವಿರುದ್ಧ ಕಟ್ಟೆಚ್ಚರ ವಹಿಸಲು ದೇಶಾದ್ಯಂತ ಮೇ 3ರವರೆಗೆ ಲಾಕ್ಡೌನ್ ಮುಂದುವರೆದಿದೆ. ಆದರೆ ಹುಬ್ಬಳ್ಳಿ ಜನರು ಮಾತ್ರ ಮನೆಯಿಂದ ಹೊರಬರುತ್ತಿದ್ದು, ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ. ಬೆಳ್ಳಂಬೆಳಗ್ಗೆ ವಾಹನಗಳು ರೋಡಿಗಿಳಿದಿದ್ದವು. ಅಷ್ಟೇ ಅಲ್ಲದೆ, ಐದು ಜನರಿಗೆ ಕೊರೊನಾ ಸೋಂಕು ಕಂಡುಬಂದಿದ್ದು, ಅದೇ ಏರಿಯಾದಲ್ಲಿ ಜನರು ನಿರ್ಲಕ್ಷ್ಯ ವಹಿಸಿ ಓಡಾಡುತ್ತಿದ್ದಾರೆ. ಜನರ ಹಿತದೃಷ್ಟಿಯಿಂದ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದ್ರೆ ಇದನ್ನು ಉಲ್ಲಂಘಿಸಿ ಜನರು ಬೇಜವಾಬ್ದಾರಿ ಮೆರೆಯುತ್ತಿರುವುದು ವಿಪರ್ಯಾಸವೇ ಸರಿ.