ಸಾರಿಗೆ ಸಚಿವರ ಕ್ಷೇತ್ರದಲ್ಲಿ ಬಸ್ ಸಂಚಾರ ಬಂದ್ - Athani protest
🎬 Watch Now: Feature Video
ಅಥಣಿ: ಸಾರಿಗೆ ನೌಕರರ ವಿವಿಧ ಬೇಡಿಕೆ ಹಾಗೂ 6ನೇ ವೇತನ ಆಯೋಗ ಜಾರಿ ಮಾಡಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ವಕ್ಷೇತ್ರವಾದ ಅಥಣಿಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ದಿನನಿತ್ಯ ಅಥಣಿ ಸಾರಿಗೆ ಘಟಕದಿಂದ 360 ಬಸ್ ಸಂಚಾರ ನಡೆಸಲಾಗುತ್ತದೆ. ಆದರೆ ಇಂದು ಯಾವುದೇ ಬಸ್ ಸಂಚಾರ ಇಲ್ಲದೆ ಕೆಲವು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ.