ಡಿಕೆಶಿ ಬಂಧನದ ಹಿಂದೆ ಬಿಜೆಪಿ ಪಾತ್ರವಿಲ್ಲ: ಯತ್ನಾಳ್ ಸ್ಪಷ್ಟನೆ - ವಿಜಯಪುರ
🎬 Watch Now: Feature Video
ವಿಜಯಪುರ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಈಡಿ ಬಂಧಿಸಿರುವ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ನಾಯಕರು ಯಾವುದೇ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ. ಪಕ್ಷದ ನಾಯಕರ ಬಗ್ಗೆ ಹಗುರವಾಗಿ ಮಾತನಾಡಬಾರದು, ಈ ಹಿಂದೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಸಿಬಿಐ ವಿಚಾರಣೆ ಮಾಡಿದನ್ನು ನೋಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಹಿಂದೆ ಯುಪಿಎ ಅವಧಿಯಲ್ಲಿ ನೀಡಿದ ಕಿರುಕುಳವನ್ನೂ ನೋಡಿದ್ದೇವೆ. ಕಾನೂನು ಪ್ರಕಾರ ಏನು ಆಗಬೇಕು ಅದು ಆಗುತ್ತೆ, ನನಗೆ ಇಡಿ ಅಂದ್ರೆನೇ ಗೊತ್ತಿರಲಿಲ್ಲ ಇತ್ತಿಚಿಗೆ ಅದರ ಬಗ್ಗೆ ನನಗೆ ಗೊತ್ತಾಗಿದೆ ಎಂದರು.