ಹರಿದು ಬಿದ್ದ ಸೇಬಿನ ಹಾರ.. ಸ್ವಲ್ಪದರಲ್ಲೇ ಆರ್. ಶಂಕರ್ ಬಚಾವ್
🎬 Watch Now: Feature Video
ರಾಣೇಬೆನ್ನೂರು (ಹಾವೇರಿ): ನೂತನ ಸಚಿವರಾದ ಬಳಿಕ ಆರ್. ಶಂಕರ್ ಮೊದಲ ಬಾರಿಗೆ ರಾಣೇಬೆನ್ನೂರು ನಗರಕ್ಕೆ ಆಗಮಿಸಿದ್ದು, ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದರು. ನಗರದ ಬಸ್ ನಿಲ್ದಾಣದ ಬಳಿ ಬೆಂಬಲಿಗರು ಸುಮಾರು ಒಂದು ಕ್ವಿಂಟಲ್ ತೂಕದ ಸೇಬು ಹಣ್ಣಿನ ಮಾಲೆಯನ್ನು ಆರ್. ಶಂಕರ್ಗೆ ಕ್ರೇನ್ ಮೂಲಕ ಹಾಕುತ್ತಿದ್ದರು. ಈ ವೇಳೆ ಕೆಲವರು ಹಣ್ಣು ಕಿತ್ತುಕೊಳ್ಳಲು ಯತ್ನಿಸಿದ್ದು, ಹಾರಕ್ಕೆ ಕಟ್ಟಿದ್ದ ಕೋಲು ಕೆಳಗೆ ಬಿದ್ದಿದೆ. ತಕ್ಷಣ ಗಮನಿಸಿದ ಬೆಂಬಲಿಗರು ಸಚಿವರ ತಲೆ ಮೇಲೆ ಕೋಲು ಬೀಳೋದನ್ನ ತಪ್ಪಿಸಿದ್ದಾರೆ.