Watch: ನವರಾತ್ರಿ ಪೂಜೆಗೆ ಅಲಂಕಾರಗೊಂಡ ಚಾಮುಂಡಿ ತಾಯಿ ಉತ್ಸವ ಮೂರ್ತಿ, ಹೇಗಿದೆ ಸಿದ್ಧತೆ? - ಇತ್ತೀಚಿನ ಮೈಸೂರು ಸುದ್ದಿ
🎬 Watch Now: Feature Video
ನವರಾತ್ರಿಯ ಮೊದಲ ದಿನ ಚಾಮುಂಡಿ ಬೆಟ್ಟದಲ್ಲಿ ವೃಶ್ಚಿಕ ಲಗ್ನದಲ್ಲಿ ನಾಡ ಹಬ್ಬ ದಸರಾಗೆ, ಬೆಳ್ಳಿ ರಥದಲ್ಲಿ ಇರುವ ನಾಡ ದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗುವುದು. ಈ ಬಗ್ಗೆ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಧರ್ ದೀಕ್ಷಿತ್ ಈ ಟಿವಿ ಭಾರತ್ ಜೊತೆ ಮಾತನಾಡಿ, ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು, ನವರಾತ್ರಿ ಹಬ್ಬ ಬಹಳ ವಿಶೇಷ ಹಬ್ಬ. 9 ದಿನಗಳ ಕಾಲ ದುರ್ಗೆಯ ಆರಾಧನೆ ಮಾಡಲಾಗುತ್ತದೆಯೆಂದರು. ನವರಾತ್ರಿಯ ಮೊದಲ ದಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಬೆಳಿಗ್ಗೆ ರುದ್ರಾಭೀಷೇಕ, ಪಂಚಾಭಿಷೇಕ, ಯಂತ್ರ ಪೂಜೆ, ದುರ್ಗಾಚನೆ ಮಾಡುವುದು ನವರಾತ್ರಿಯ ವಿಶೇಷ. ಜೊತೆಗೆ ಬೆಳಿಗ್ಗೆ 9:39 ರಿಂದ 10:29 ರವರೆಗೆ ಜರುಗುವ ವೃಶ್ಚಿಕ ಲಗ್ನದಲ್ಲಿ ದಸರಾಗೆ ಮುಖ್ಯಮಂತ್ರಿಗಳು ಹಾಗೂ ಸಾಹಿತಿ ಎಸ್.ಎಲ್.ಭೈರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ನವರಾತ್ರಿಗೆ ಚಾಲನೆ ಸಿಗಲಿದೆಯೆಂದರು.