ಸಂಸದ ನಾರಾಯಣಸ್ವಾಮಿಗೆ ಪೆಮ್ಮನಹಳ್ಳಿ ಪ್ರವೇಶ ನಿರಾಕರಣೆ ಪ್ರಕರಣ: ಜಿಲ್ಲಾಡಳಿತದಿಂದ ಜಾಗೃತಿ - MP Narayanaswamy
🎬 Watch Now: Feature Video
ತುಮಕೂರು: ಚಿತ್ರದುರ್ಗ ಸಂಸದ ನಾರಾಯಣಸ್ವಾಮಿಗೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಗೆ ಪ್ರವೇಶ ನಿರಾಕರಿಸಿರುವ ಹಿನ್ನೆಲೆ, ಇಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಹಾಗೂ ಜಿಲ್ಲಾ ಸಿಇಒ ಶುಭ ಕಲ್ಯಾಣ್ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿದರು. ಇದೇ ವೇಳೆ ಸಭೆ ನಡೆಸಿ ಮಾತಾನಾಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು, ಮೂಢನಂಬಿಕೆ ಹೋಗಲಾಡಿಸಬೇಕಿದೆ. ಇದು ಕೇವಲ ಸಂಸದ ನಾರಾಯಣಸ್ವಾಮಿ ಅವರಿಗೆ ಮಾತ್ರವಲ್ಲ. ಪ್ರತಿಯೊಬ್ಬರಿಗೂ ಎಲ್ಲಾ ದೇವಸ್ಥಾನಗಳು ಮತ್ತು ಗ್ರಾಮಗಳಿಗೆ ಪ್ರವೇಶಿಸುವ ಮುಕ್ತ ಅವಕಾಶವನ್ನು ಕಲ್ಪಿಸಿ ಕೊಡುವಂತಹ ವಾತಾವರಣ ನಿರ್ಮಿಸಬೇಕಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದರು.
Last Updated : Sep 18, 2019, 11:05 PM IST