ಈವರೆಗೂ ವಿಲನ್, ಇದೀಗ ಹೀರೋ ಬಿಎಸ್ವೈ ಸರ್ಕಾರ: ಸಿದ್ದರಾಮಯ್ಯರಿಗೆ ಟಾಂಗ್ ನೀಡಿದ ಕಟೀಲ್ - ಹೀರೊ ಬಿಎಸ್ವೈ ಸರ್ಕಾರ
🎬 Watch Now: Feature Video
ಗದಗ ನಗರದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಳೀನ್ ಕುಮಾರ್, 2013 ರಿಂದ 2018 ರವರೆಗೆ ವಿಲನ್ ಸರ್ಕಾರ ಇತ್ತೆಂದು ಸಿದ್ದರಾಮಯ್ಯರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ರು. ಸಿದ್ಧರಾಮಯ್ಯ ತಮ್ಮ ಅವಧಿಯಲ್ಲಿ ಮಠ ಮಂದಿರಗಳನ್ನು, ಸಮಾಜವನ್ನು ಒಡೆದರು. ಆದರೀಗ ಇದಕ್ಕೆಲ್ಲಾ ಸೆಡ್ಡು ಹೊಡೆದು ಹೀರೊ ಬಿಎಸ್ವೈ ಸರ್ಕಾರ ಆಡಳಿತದಲ್ಲಿದೆ. ಇವರ ಆಡಳಿತಾವಧಿಯಲ್ಲಿ ರಾಜ್ಯ ಅಭಿವೃದ್ಧಿಯಾಗಿ ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ್ರು.