ಪೇಜಾವರ ಶ್ರೀ ಬೃಂದಾವನಸ್ತ: ಮುತಾಲಿಕ್ ಸಂತಾಪ
🎬 Watch Now: Feature Video
ಪೇಜಾವರ ಶ್ರೀಗಳ ನಿಧನಕ್ಕೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸಂತಾಪ ಸೂಚಿಸಿದ್ದಾರೆ. ಶ್ರೀಗಳು ಹಿಂದೂ ಸಮಾಜದ ಮಾರ್ಗದರ್ಶಕರಾಗಿದ್ದರು. ಹಿಂದುತ್ವದ ಪ್ರತಿಪಾದಕರಾಗಿ ಆಧುನಿಕ ವಿವೇಕಾನಂದರಾಗಿದ್ದ ಅವರು ಅಗಲಿರುವುದು ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶ್ರೀಗಳು ನಮ್ಮ ಗುರುಗಳು ಹಾಗೂ ಮಾರ್ಗದರ್ಶಕರಾಗಿದ್ದರು, ಮಹಾನ್ ರಾಷ್ಟ್ರೀಯ ಸಂತನ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ಹಾನಿಯಾಗಿದೆಯೆಂದು ತಿಳಿಸಿದರು.