ರಾಜ್ಯ ಬಜೆಟ್ ಮಂಡನೆಯಾದ ಇಪ್ಪತ್ತು ದಿನಗಳಲ್ಲಿ ಬಿಬಿಎಂಪಿ ಬಜೆಟ್; ಗೌರವ್ ಗುಪ್ತಾ - ಬಿಬಿಎಂಪಿ ಬಜೆಟ್
🎬 Watch Now: Feature Video
ಬೆಂಗಳೂರು: ಮಾರ್ಚ್ 8ಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಜನರು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ಕುರಿತಂತೆ ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ರಾಜ್ಯ ಬಜೆಟ್ನಲ್ಲಿ ಸಿಲಿಕಾನ್ ಸಿಟಿಗೆ ಅನುದಾನದ ನಿರೀಕ್ಷೆ ಇದ್ದು, ಮೂಲಸೌಕರ್ಯ ಅಭಿವೃದ್ಧಿ ಕುರಿತಂತೆ ಸಭೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ರಾಜ್ಯ ಬಜೆಟ್ ಮಂಡನೆಯಾದ ಇಪ್ಪತ್ತು ದಿನಗಳ ಬಳಿಕ ಪಾಲಿಕೆ ಬಜೆಟ್ ಬರಲಿದೆ ಎಂದು ತಿಳಿಸಿದರು. ಈ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.