ನಾಯಿ ಮರಿಗಾಗಿ ತಾಯಿಯ ರೋದನೆ: ರಾಮನಗರದಲ್ಲಿ ಮನಕಲಕುವ ದೃಶ್ಯ - ನಾಯಿಮರಿ ಮುಂದೆ ಅಳುತ್ತಿರುವ ತಾಯಿ ನಾಯಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10332883-thumbnail-3x2-bngjpg.jpg)
ರಾಮನಗರ: ತನ್ನ ಮರಿ ಸಾವಿನಿಂದ ತಾಯಿ ನಾಯಿ ಕಣ್ಣೀರು ಹಾಕುತ್ತಿದ್ದ ಮನಕಲಕುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾತನೂರು ರಸ್ತೆಯಲ್ಲಿ ನಡೆದಿದೆ. ಇಲ್ಲಿರುವ ಹೋಟೆಲ್ ಬಳಿ ಕಾವೇರಿ ವಾಟರ್ ಪೈಪ್ಲೈನ್ ಏರ್ ಔಟ್ಗಾಗಿ ನೀರಿನ ತೊಟ್ಟಿಯನ್ನು ಕಟ್ಟಲಾಗಿದೆ. ಇದರಲ್ಲಿ ಆಕಸ್ಮಿಕವಾಗಿ ನಾಯಿಮರಿಯೊಂದು ಬಿದ್ದು ಸಾವನ್ನಪ್ಪಿದೆ. ತನ್ನ ಮರಿ ಸಾವಿನಿಂದ ತಾಯಿ ನಾಯಿ ಕಣ್ಣೀರು ಇಡುತ್ತಿತ್ತು. ಇದನ್ನು ಗಮನಿಸಿದ ಹೋಟೆಲ್ ಮಾಲೀಕ ಮಹೇಶ್ ಎಂಬುವವರು ತೊಟ್ಟಿಯಿಂದ ನಾಯಿಮರಿಯನ್ನು ಹೊರ ತಂದು ಅದರ ಅಂತ್ಯ ಸಂಸ್ಕಾರ ನೆರವೇರಿಸಿದರು.