ಸತತ ಮಳೆಯಿಂದ ನೆಲಕಚ್ಚಿದ ಮುಂಗಾರು ಹಂಗಾಮಿನ ಬೆಳೆಗಳು: ಪ್ರತ್ಯಕ್ಷ ವರದಿ - Bidar News
🎬 Watch Now: Feature Video
ಬೀದರ್: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮುಂಗಾರು ಹಂಗಾಮಿನ ಬೆಳೆಗಳಾದ ಉದ್ದು, ಹೆಸರು, ತೊಗರಿ ಬೆಳೆಗಳು ನೆಲಕಚ್ಚಿವೆ. ರೈತರು ಈ ಬಾರಿ ಸೊಯಾಬಿನ್ ಬೆಳೆಗೆ ಮಾತ್ರ ವಿಮೆ ಮಾಡಿಸಿದ್ದು, ಹೆಸರು, ಉದ್ದು ಬೆಳೆಗಳಿಗೆ ವಿಮೆ ಮಾಡಿಸಿಲ್ಲ. ಇದೀಗ ಸತತ ಮಳೆಯಿಂದಾಗಿ ಬೆಳೆಗಳು ನೆಲಸಮವಾಗಿವೆ. ಹೀಗಾಗಿ ಇತ್ತ ಬೆಳೆಯೂ ಇಲ್ಲದೆ, ಅತ್ತ ಬೆಳೆ ವಿಮೆಯೂ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಈಟಿವಿ ಭಾರತದ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.