ಕರೆ ಮಾಡಬೇಕೆಂದು ಮೊಬೈಲ್ ಪಡೆದು ಮಾತನಾಡುತ್ತಲೇ ಫೋನ್ ಎಗರಿಸಿದ ಖದೀಮ : ವಿಡಿಯೋ - ದಾವಣಗೆರೆಯಲ್ಲಿ ಮೊಬೈಲ್ ಕಳ್ಳತನ
🎬 Watch Now: Feature Video
ದಾವಣಗೆರೆ: ಗ್ರಾಹಕನ ಸೋಗಿನಲ್ಲಿ ಬಂದ ಖದೀಮನೋರ್ವ ಮೊಬೈಲ್ ಬ್ಯಾಟರಿ ಲೋ ಆಗಿದೆ. ಕರೆ ಮಾಡಬೇಕು ಎಂದು ನೆಪ ಹೇಳಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಬಳಿ ಮೊಬೈಲ್ ಪಡೆದಿದ್ದಾನೆ. ಹೀಗೆ ಮಾತನಾಡುತ್ತಲೇ ಮೊಬೈಲ್ ಸಮೇತ ಪರಾರಿಯಾಗಿದ್ದಾನೆ. ಘಟನೆ ದಾವಣಗೆರೆಯ ಸರ್ಎಂವಿ ಕಾಲೇಜಿನ ಬಳಿಯ ಬೇಕರಿಯಲ್ಲಿ ನಡೆದಿದ್ದು, ಕಿರಣ್ ಕುಮಾರ್ ಎಂಬುವರು ಮೊಬೈಲ್ ಕಳೆದುಕೊಂಡ ಬೇಕರಿ ಸಿಬ್ಬಂದಿ. ಈ ಕುರಿತಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.