ಆ ರೀತಿಯ ಕಸುಬು ಇದ್ದವನಿಗೆ ತಾನೇ ಸಿಡಿ ಭಯ, ನೀವ್ಯಾಕ್ರೀ ಹೆದರಬೇಕು?: ಶಿವಲಿಂಗೇಗೌಡರ ಮಾತು ಕೇಳಿ.. - ಶಾಸಕ ಶಿವಲಿಂಗೇಗೌಡ
🎬 Watch Now: Feature Video
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಬಗ್ಗೆ ವಿಧಾನಸಭೆಯಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡುತ್ತಾ, ಡಿಸಿಗಳ ಜೊತೆ ಶಾಸಕರು ಕೂಡಾ ಗ್ರಾಮ ವ್ಯಾಸ್ತವ್ಯ ಮಾಡಲು ಸಚಿವರು ಅವಕಾಶ ನೀಡಬೇಕು. ಆಗ ನಾವು ಕೂಡಾ ರಾತ್ರಿ ಅವರೊಂದಿಗೆ ಮಲಗಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ರು. ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ, ಮತ್ಯಾರೋ ಸಿಡಿಪಾಡಿ ಮಾಡಿಬಿಟ್ಟಾರು ಹುಷಾರು ಎಂದರು. ಅಯ್ಯೋ ಸೀಡಿಗ್ಯಾಕ್ರಿ ಹೆದರಬೇಕು. ಸಿಡಿಸಿಡಿ ಎಂದು ವಿಧಾನಸಭೆಗೆ ಬರಬೇಡಿ, ಎಂಎಲ್ಎ ಎಲೆಕ್ಷನ್‌ಗೂ ನಿಲ್ಲಬೇಡಿ. ನೀವ್ಯಾಕ್ರಿ ಹೆದರಬೇಕು?. ಆ ರೀತಿಯ ಕಸುಬು ಇದ್ದರೆ ತಾನೇ ಸಿಡಿ ಭಯ?, ತಪ್ಪು ಮಾಡಿಲ್ಲ ಅಂದರೆ ಭಯ ಪಡುವುದೇಕೆ ಎಂದು ಶಿವಲಿಂಗೇಗೌಡ ಹೇಳಿದರು.