ಚರಿತ್ರೆಯಲ್ಲಿ ಸತ್ಯವಿರಬೇಕೇ ಹೊರತು ಸುಳ್ಳಲ್ಲ: ಪಠ್ಯದಿಂದ ಟಿಪ್ಪು ಇತಿಹಾಸ ಕೈಬಿಡಲು ಶಾಸಕ ಅಪ್ಪಚ್ಚು ರಂಜನ್ ಪಟ್ಟು! - MLA Appachu Ranjan latest statements
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4917256-thumbnail-3x2-jay.jpg)
ಪಠ್ಯಪುಸ್ತಕದಿಂದ ಟಿಪ್ಪು ಇತಿಹಾಸವನ್ನು ಕೈಬಿಡಬೇಕು ಎನ್ನುವ ನಮ್ಮ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಸಂಬಂಧ ಅಗತ್ಯ ದಾಖಲೆಯನ್ನು ಪರಿಶೀಲನಾ ಸಮಿತಿ ಮುಂದೆ ಹಾಜರುಪಡಿಸುತ್ತೇನೆ. ಟಿಪ್ಪು ಒಳ್ಳೆಯ ಆಡಳಿತಗಾರ, ಸ್ವಾತಂತ್ರ್ಯ ಹೋರಾಟಗಾರ ಎಂದು ಪಠ್ಯಪುಸ್ತಕದಲ್ಲಿದೆ. ಆದರೆ, ಚರಿತ್ರೆಯಲ್ಲಿ ಸತ್ಯ ಇರಬೇಕು, ಸುಳ್ಳಿರಬಾರದು. ಮಕ್ಕಳಿಗೆ ಸತ್ಯವನ್ನು ತಿಳಿಸಬೇಕು. ಟಿಪ್ಪು ಹೋರಾಟ ಕೇವಲ ರಾಜ್ಯ ವಿಸ್ತರಿಸಲು ಮಾತ್ರ ಆಗಿದ್ದು, ಕನ್ನಡಕ್ಕಾಗಿ ಅಥವಾ ಸ್ವಾತಂತ್ರ್ಯ ಹೋರಾಟಕ್ಕಾಗಿ ಆತ ಏನೂ ಮಾಡಿಲ್ಲ. ಆತ ಕೊಲೆ, ದೇವಾಲಯ ಲೂಟಿ, ಮತಾಂತರ ಮಾಡಿದ್ದಾನೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ 'ಈಟಿವಿ ಭಾರತ'ದೊಂದಿಗೆ ತಿಳಿಸಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.