ಸದ್ಯದ ಸ್ಥಿತಿಯಲ್ಲಿ ಹೆಚ್ ವಿಶ್ವನಾಥ್‌ಗೆ ಪರಿಷತ್ ಸ್ಥಾನ ಸಾಧ್ಯವಿಲ್ಲ: ಅಪ್ಪಚ್ಚು ರಂಜನ್ - appacchu ranjan reaction about h vishwanath ticket
🎬 Watch Now: Feature Video

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಹೆಚ್. ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಸ್ಥಾನ ಕೊಡುವಂತಹ ಸಾಧ್ಯತೆಗಳು ಕಡಿಮೆ ಇವೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಮ್ಮಿಶ್ರ ಸರ್ಕಾರದ ಪತನದ ಬಳಿಕ ನಡೆದ ಮಧ್ಯಂತರ ಚುನಾವಣೆಯಲ್ಲಿ ಹೆಚ್.ವಿಶ್ವನಾಥ್ ಅವರು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಪ್ರಸ್ತುತ ಪಕ್ಷದಿಂದ 4 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಇನ್ನುಳಿದವರನ್ನು ರಾಜಕೀಯ, ಶಿಕ್ಷಣ, ಕಲೆ ಹಾಗೂ ಕ್ರೀಡಾ ಕ್ಷೇತ್ರಗಳಿಂದ ಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕಿದೆ. ಅಲ್ಲಿ ಅವರಿಗೆ ಸ್ಥಾನ ಸಿಗುವ ನಿರೀಕ್ಷೆಗಳಿವೆ. ಕೊಟ್ಟ ಮಾತಿನಂತೆ ಸಿಎಂ ಯಡಿಯೂರಪ್ಪ ನಡೆದುಕೊಳ್ಳಲಿದ್ದಾರೆ ಎಂದು ರಂಜನ್ ಹೇಳಿದ್ರು.