ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಅಧ್ಯಯನ ಮಾಡಲಿ: ಸಿಸಿ ಪಾಟೀಲ್ - Minister CC Patil
🎬 Watch Now: Feature Video
ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಣ್ಯಪುರುಷ ಸಾವರ್ಕರ್ ಬಗ್ಗೆ ಸ್ವಲ್ಪ ಅಧ್ಯಯನ ಮಾಡುವುದು ಒಳಿತು ಎಂದು ಸಚಿವ ಸಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ನಗರದ ಸರ್ಕಿಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಸ್ವಾತಂತ್ರ್ಯ ಪ್ರೇಮಿಗಳನ್ನು ಹೀಯಾಳಿಸುವುದನ್ನೇ ಅವರು ರೂಢಿ ಮಾಡಿಕೊಂಡಿದ್ದಾರೆ. ಕರಿನೀರ ಕಾಳಾಪಾನಿ ಶಿಕ್ಷೆ ಏನು ಅನ್ನೋದನ್ನು ಸ್ವತಃ ವಕೀಲಿಕೆ ಮಾಡಿರುವ ಸಿದ್ದರಾಮಯ್ಯ ನೋಡಿಕೊಂಡು ಬರಲಿ. ಅವರು ತಮ್ಮ ಹೇಳಿಕೆಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.