ದೇವಿರಮ್ಮನ ದರ್ಶನ ಪಡೆದ ಸಚಿವ ಸಿ.ಟಿ ರವಿ - ಚಿಕ್ಕಮಗಳೂರಿನ ದೇವಿರಮ್ಮ ಬೆಟ್ಟ
🎬 Watch Now: Feature Video

ಮಲ್ಲೇನಹಳ್ಳಿಯಲ್ಲಿರುವ ದೇವಿರಮ್ಮ ಬೆಟ್ಟಕ್ಕೆ ತೆರಳಿರುವ ಸಚಿವ ಸಿ.ಟಿ ರವಿ ದೇವಿರಮ್ಮನ ದರ್ಶನ ಪಡೆದಿದ್ದಾರೆ. ದೇವಿಯ ದರ್ಶನ ಪಡೆಯಲು ಭಕ್ತಾದಿಗಳು ಮಳೆ ಲೆಕ್ಕಿಸದೆ ಬರಿಗಾಲಲ್ಲಿ ಬೆಟ್ಟ ಹತ್ತುತ್ತಿದ್ದಾರೆ. ಜಾರುವ ಕಾಲು ದಾರಿಯಲ್ಲೇ ಬೆಟ್ಟ ಹತ್ತಿದ ಸಚಿವ ಸಿ. ಟಿ ರವಿ ದೇವಿಗೆ ಮಂಗಳಾರತಿ ಮಾಡಿ ಭಕ್ತಿಯಿಂದ ಪೂಜಾ ಕಾರ್ಯಕ್ರಮ ನೆರೆವೇರಿಸಿದ್ದಾರೆ. ಇಲ್ಲಿ ವರ್ಷಕ್ಕೊಮ್ಮೆ ಮಾತ್ರ ಬೆಟ್ಟದಲ್ಲಿರುವ ದೇವಿ ಭಕ್ತರಿಗೆ ದರ್ಶನಭಾಗ್ಯ ಕರುಣಿಸುತ್ತಾಳೆ.