ತುತ್ತು ಅನ್ನಕ್ಕೆ ಅಂಗಲಾಚಿದ ಕೂಲಿ ಕಾರ್ಮಿಕರು..! - ಕೊಡಗಿನಲ್ಲಿ ವಲಸೆ ಕಾರ್ಮಿಕರ ಪರದಾಟ
🎬 Watch Now: Feature Video
ಕೊರೊನಾ ವೈರಸ್‌ನಿಂದ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆ ನಿನ್ನೆಯಿಂದ ಶಿವಮೊಗ್ಗದ ಮೂಲದ 5 ಕುಟುಂಬಗಳು ಹಸಿವಿನಿಂದ ಬಳಲುತ್ತಿರುವ ಘಟನೆ ಮಡಿಕೇರಿ ಬಸ್ ನಿಲ್ದಾಣದ ಬಳಿ ಕಂಡು ಬಂದಿದೆ. ಇವರೆಲ್ಲ ಕೂಲಿ ಕೆಲಸಕ್ಕೆ ಶಿವಮೊಗ್ಗ ಜಿಲ್ಲೆಯಿಂದ ವಲಸೆ ಬಂದಿದ್ದರು. ಲಾಕ್‌ಡೌನ್ ಹಿನ್ನೆಲೆ ಪುಟ್ಟ ಮಕ್ಕಳು ಸೇರಿದಂತೆ ಎಲ್ಲರೂ ನಿನ್ನೆಯಿಂದಲೂ ಹಸಿವಿನಿಂದ ಬಳಲುತ್ತಿದ್ದಾರೆ. ಅವರಿವರು ಕೊಟ್ಟ ಬಿಸ್ಕೆಟ್ ತಿಂದು ನೀರು ಕುಡಿದಿದ್ದಾರೆ. ಒಂದೆಡೆ ಊರಿಗೆ ತೆರಳಲು ಸಾರಿಗೆ ವ್ಯವಸ್ಥೆಯೂ ಇಲ್ಲದೇ ಹಾಗೆಯೇ ಕೂಲಿ ಕೆಲಸವೂ ಇಲ್ಲದೇ , ಹಣವೂ ಇಲ್ಲದೇ ಊಟದ ವ್ಯವಸ್ಥೆಯೂ ಇಲ್ಲದೆ ಪರದಾಡಿ ಊಟ ಕೊಡುವಂತೆ ಕಾರ್ಮಿಕರು ಮನವಿ ಮಾಡಿದ್ದಾರೆ.