ಸೈಕಲ್ ಏರಿ ತಮ್ಮ ತಮ್ಮ ರಾಜ್ಯಗಳಿಗೆ ಹೊರಟ ರಾಜ್ಯದ ವಲಸೆ ಕಾರ್ಮಿಕರು: ವಿಡಿಯೋ - ಗದಗ ಸುದ್ದಿ
🎬 Watch Now: Feature Video
ರಾಜ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಬಂದಿದ್ದ ವಿವಿಧ ರಾಜ್ಯಗಳ ಸುಮಾರು 11 ಮಂದಿ ವಲಸೆ ಕಾರ್ಮಿಕರು ಸೈಕಲ್ನಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಹೈದರಾಬಾದ್, ರಾಂಚಿ, ನಾಗ್ಪುರ ಸೇರಿದಂತೆ ವಿವಿಧ ರಾಜ್ಯಗಳ ಯುವಕರು ಸೈಕಲ್ನಲ್ಲೇ ಪ್ರಯಾಣ ಬೆಳೆಸಿದ್ದಾರೆ. ಸರ್ಕಾರಕ್ಕೆ ನಮ್ಮನ್ನು ಕಳುಹಿಸಿ ಕೊಡುವಂತೆ ಮನವಿ ಮಾಡಿದ್ದೆವು. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಬೈಸಿಕಲ್ನಲ್ಲೇ ಊರಿಗೆ ಮರಳಿದ್ದೇವೆ. ನಮಗೆ ನಮ್ಮ ಊರು ತಲುಪಲು ಇನ್ನೂ 12ರಿಂದ 15 ದಿನಗಳು ಬೇಕಾಗುತ್ತದೆ. ಆಹಾರ ಹಾಗೂ ನೀರನ್ನು ಹೋಗುವ ದಾರಿಯಲ್ಲೇ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಯುವಕರು ತಿಳಿಸಿದ್ದಾರೆ.