ಕಸದ ರಾಶಿ ನಡುವೆ ತರಕಾರಿ ವ್ಯಾಪಾರಕ್ಕೆ ಸ್ಥಳ ನಿಗದಿ...ಸಾರ್ವಜನಿಕರ ಅಸಮಾಧಾನ - ಹಾಸನ ಲೇಟೆಸ್ಟ್ ನ್ಯೂಸ್

🎬 Watch Now: Feature Video

thumbnail

By

Published : Apr 15, 2020, 1:07 PM IST

ಹಾಸನ: ಕೊರೊನಾ ಹಿನ್ನೆಲೆಯಲ್ಲಿ ದೇಶವೇ ಲಾಕ್​ಡೌನ್ ಆಗಿದ್ದು,ಜನರಿಗೆ ಅನುಕೂಲವಾಗಲೆಂದು ವಾರದ ಮೂರು ದಿನಗಳ ಕಾಲ ತರಕಾರಿ ವ್ಯಾಪಾರ ಮಾಡಲು ಸ್ಥಳ ನಿಗದಿ ಮಾಡಲಾಗಿದೆ. ನಗರದ ಸಮೀಪದಲ್ಲಿರುವ ಹರಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇಜೂರು ರಸ್ತೆ, ರಿಂಗ್ ರಸ್ತೆ ಬಳಿಯಿರುವ ಖಾಲಿ ನಿವೇಶನದ ಸುತ್ತ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಪ್ರದೇಶದಲ್ಲಿಕಸದ ರಾಶಿಗಳು ರಸ್ತೆ ಬದಿ ಸಾಲು ಸಾಲಾಗಿ ಬಿದ್ದಿದೆ. ಇನ್ನು ಕೊರೊನಾ ಭೀತಿಯಿರುವ ಈ ಸಮಯದಲ್ಲಿ ಕಸದಿಂದ ತುಂಬಿರುವ ಪ್ರದೇಶದಲ್ಲಿ ತರಕಾರಿ ವ್ಯಾಪಾರ ಮಾಡಲು ಸ್ಥಳವಕಾಶ ಕಲ್ಪಿಸಿದ್ದು, ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.