ಶಾಲೆಗೆ ನುಗ್ಗಿದ ಮಲಪ್ರಭಾ ನದಿ ನೀರು: ದವಸ-ಧಾನ್ಯಗಳೆಲ್ಲ ನೀರುಪಾಲು - Gadag latest news
🎬 Watch Now: Feature Video

ಗದಗ: ಮಲಪ್ರಭಾ ನದಿ ಪ್ರವಾಹದಿಂದ ರೋಣ ತಾಲೂಕಿನ ಅಮರಗೋಳ, ಹೊಳೆಮಣ್ಣೂರ, ಮೆಣಸಗಿ ಹಾಗೂ ಹೊಳೆಹಡಗಲಿ ಗ್ರಾಮಗಳಿಗೂ ನೀರು ನುಗ್ಗಿದೆ. ಅಮರಗೋಳದ ಶಾಲೆಯೊಂದು ಸಂಪೂರ್ಣ ಜಲಾವೃತವಾಗಿದೆ.
ಇಲ್ಲಿ ಸುಮಾರು ಎರಡೂವರೆ ಅಡಿಯಷ್ಟು ನೀರು ನಿಂತಿದೆ. ಹೊಳೆಆಲೂರಿನ ಬನಶಂಕರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಭಾಗದ ಮನೆಗಳಿಗೆ ನೀರು ನುಗ್ಗಿದ್ದರಿಂದ ದವಸ-ಧಾನ್ಯಗಳು ನೀರಿನಲ್ಲಿ ತೇಲಾಡುತ್ತಿವೆ. ನದಿ ಪಾತ್ರದಲ್ಲಿನ ಜಮೀನಿಗೂ ನೀರು ನುಗ್ಗಿದ್ದು ಸೂರ್ಯಕಾಂತಿ, ಮೆಕ್ಕೆಜೋಳ, ಈರುಳ್ಳಿ, ಕಬ್ಬು ಹೀಗೆ... ಅನೇಕ ಬೆಳೆಗಳು ನೀರಿನಲ್ಲಿ ಮುಳುಗಿವೆ.