ವಿಜಯನಗರ, ಚಿಕ್ಕೋಡಿ ಬಳಿಕ ಸಿಂಧನೂರು ಜಿಲ್ಲೆ ಘೋಷಣೆಗಾಗಿ ಹೋರಾಟಕ್ಕೆ ಅಣಿ.. - Make the district headquarters of Sindhanoor Taluk
🎬 Watch Now: Feature Video
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕನ್ನ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಹೋರಾಟ ಆರಂಭಿಸಲು ಹಂಚಿನಾಳ, ಕಣ್ಣೂರು, ಮುದ್ದಾಪುರ, ಕೊಳಬಾಳ ಗ್ರಾಮದ ಯುವಕರು ಪೂರ್ವಭಾವಿ ಸಭೆ ನಡೆಸಿದ್ದಾರೆ. ಜಿಲ್ಲೆಯ ಮಸ್ಕಿ ತಾಲೂಕಿನ ಕಣ್ಣೂರಿನಲ್ಲಿ ಗ್ರಾಮದ ಭಗತ್ಸಿಂಗ್ ಜನ್ಮದಿನ ಆಚರಿಸಿದ ಯುವಕರ ತಂಡ ಬಳಿಕ ಸಿಂಧನೂರನ್ನ ಜಿಲ್ಲಾ ಕೇಂದ್ರ ಮಾಡಬೇಕು ಎನ್ನುವ ಕುರಿತು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟದ ರೂಪರೇಷಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈಗಿರುವ ರಾಯಚೂರು ಜಿಲ್ಲೆ ಕೇಂದ್ರಕ್ಕೆ ಸಿಂಧನೂರು ತಾಲೂಕಿನವರು 90 ಕಿ.ಮೀ.ವರೆಗೆ ತೆರಳಬೇಕಾಗಿದೆ. ಹೀಗಾಗಿ ಜಿಲ್ಲೆ ಕೇಂದ್ರಕ್ಕೆ ಅರ್ಹತೆ ಹೊಂದಿರುವ ಸಿಂಧನೂರಿನಲ್ಲಿ ಜಿಲ್ಲೆ ಕೇಂದ್ರ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಹಂಚಿನಾಳ, ಕಣ್ಣೂರು, ಮುದ್ದಾಪುರ, ಕೊಳಬಾಳ ಗ್ರಾಮದ ಯುವಕರು ಸಭೆ ನಡೆಸಿದ್ರು.