ಇಳಕಲ್ನಲ್ಲಿ ಮಹಾಂತ ಶ್ರೀಗಳ ಅದ್ಧೂರಿ ಶರಣ ಸಂಸ್ಕೃತ ಮಹೋತ್ಸವ
🎬 Watch Now: Feature Video
ಬಾಗಲಕೋಟೆ ಜಿಲ್ಲೆಯಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಇಳಕಲ್ ಪಟ್ಟಣದ ವಿಜಯ ಮಹಾಂತ ಶಿವಯೋಗಿಗಳ ಡಾ.ಮಹಾಂತ ಶ್ರೀಗಳ ಶರಣ ಸಂಸ್ಕೃತ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ವಿಶ್ವಗುರು ಬಸವಣ್ಣನ ವಚನ ಸಾಹಿತ್ಯ ಮಹಾ ರಥೋತ್ಸವ ನಡೆಯಿತು. ಬಸವಾದಿ ಶರಣರ ಧರ್ಮಗ್ರಂಥ ವಚನ ಸಾಹಿತ್ಯದ ತಾಡೋಲೆ ಕಟ್ಟಿನ ಅಡ್ಡ ಪಲ್ಲಕಿ ಮಹೋತ್ಸವ ನಡೆಯಿತು. ಇಡೀ ನಗರದಲ್ಲಿ 24 ಗಂಟೆಗಳ ಅಡ್ಡಪಲ್ಲಕ್ಕಿ ಸಂಚರಿಸುವುದು ವಿಶೇಷ. ಇದು ರಾಜ್ಯದಲ್ಲಿಯೇ ಪ್ರಥಮ ಎಂಬುದು ಹೆಗ್ಗಳಿಕೆ ಇದೆ. ಜಾತ್ರೆಯಲ್ಲಿ ಶ್ರೀಗಳು, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜೆಡಿಎಸ್ ಮುಖಂಡ ಎಸ್.ಆರ್.ನವಲಿ ಹಿರೇಮಠ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.