ನಿರಂತರ ಮಳೆಯಿಂದ ಹಚ್ಚ ಹಸಿರಾಯ್ತು ಬರಿದಾಗಿದ್ದ ಗುಡ್ಡಗಾಡು - bellary news
🎬 Watch Now: Feature Video
ಜಿಲ್ಲೆಯ ಹಲವೆಡೆ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಇಲ್ಲಿನ ತುಂಗಾಭದ್ರಾ ಜಲಾಶಯ ಭಾಗದ ಗುಡ್ಡಗಾಡು ಪ್ರದೇಶಕ್ಕೆ ಜೀವಕಳೆ ಬಂದಿದೆ. ಬಿಸಿಲಿನಿಂದ ಬರಡು ಭೂಮಿಯಂತಾಗಿದ್ದ ಗುಡ್ಡಗಳು ಇದೀಗ ಹಸಿರಿನಿಂದ ಕಂಗೊಳಿಸುತ್ತಿವೆ. ಸದ್ಯ ಈ ಹೆದ್ದಾರಿ ಮೂಲಕ ಹಾದು ಹೋಗುವ ಪ್ರಯಾಣಿಕರು ಒಂದೊಮ್ಮೆ ಇತ್ತ ಕಣ್ಣಾಯಿಸಿ ಮುಂದೆ ಸಾಗುವುದು ಸಾಮಾನ್ಯ ಎಂಬಂತಾಗಿದೆ.