ಪದೆ‌ ಪದೇ ರೋಡಿಗಿಳಿಯುತ್ತಿದ್ದ ಯುವಕನಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿತ

🎬 Watch Now: Feature Video

thumbnail

By

Published : Mar 26, 2020, 11:09 PM IST

ಬೆಳಗಾವಿ: ಪೊಲೀಸರ ಮಾತಿಗೆ ಕ್ಯಾರೇ ಎನ್ನದೇ ರೋಡಿಗಿಳಿಯುತ್ತಿದ್ದ ಯುವಕನಿಗೆ ನಂದಗಡ ಠಾಣೆ ಪಿಎಸ್ಐ ಲಾಠಿ ರುಚಿ ಬಿಸಿ ಮುಟ್ಟಿಸಿದ್ದಾರೆ. ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಯುವಕ ಪೊಲೀಸರಿಂದ ಏಟು ತಿಂದಿದ್ದಾನೆ. ಈ ಯುವಕ ಪೊಲೀಸರ ಮಾತು ಧಿಕ್ಕರಿಸಿ ರಸ್ತೆಗಿಳಿಯಲು ಮುಂದಾಗಿದ್ದಾನೆ. ಇದರಿಂದ ಕುಪಿತಗೊಂಡ ನಂದಗಡ ಠಾಣೆಯ ಪಿಎಸ್ಐ ಸುಮಾ ನಾಯ್ಕ್ ಯುವಕನಿಗೆ ಲಾಠಿಯಿಂದ ಹೊಡೆದಿದ್ದಾರೆ. ಆಗ ಎದುರು ಮಾತಾಡಿದ ಯುವಕನಿಗೆ ಪುರುಷ ಪೊಲೀಸ್​ ಸಿಬ್ಬಂದಿ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಯುವಕನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.