ಸುಗಂಧ ದ್ರವ್ಯ ಮಾರಾಟಕ್ಕೆ ಲಾಕ್ಡೌನ್ ಹೊಡೆತ: ವ್ಯಾಪಾರಿಗಳ ಕಣ್ಣೀರು - Bagalkote latest News
🎬 Watch Now: Feature Video
ಬಾಗಲಕೋಟೆ: ರಂಜಾನ್ ಹಬ್ಬವು ಮುಸ್ಲಿಮರಿಗೆ ಪವಿತ್ರ ಹಬ್ಬವಾಗಿದೆ.ಈ ಸಮಯದಲ್ಲಿ ಹೊಸ ಉಡುಗೆ ತೊಡುಗೆ ಹಾಕಿಕೊಳ್ಳುವ ಜೊತೆಗೆ, ಸುಗಂಧ ದ್ರವ್ಯಗಳನ್ನು ಹಾಕಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಸಮಯದಲ್ಲಿ ಸುಗಂಧ ಮಾರಾಟ ಮಾಡುತ್ತಿರುವ ವ್ಯಾಪಾರಿಗಳಿಗೆ ಕೊರೊನಾ ಹೊಡೆತ ನೀಡಿದ್ದು, ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ. ಲಾಕ್ಡೌನ್ ಆದ ಪರಿಣಾಮ ವ್ಯಾಪಾರ ವಹಿವಾಟು ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ ಎಂದು ವ್ಯಾಪಾರಿಗಳು ನೋವು ತೋಡಿಕೊಂಡಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ವಾಕ್ ಥ್ರೂ ಮೂಲಕ ಮಾಹಿತಿ ನೀಡಿದ್ದಾರೆ.