ಲಾಕ್ಡೌನ್ ಸಡಿಲಿಕೆ ಹಾವೇರಿಯಲ್ಲಿ ರಸ್ತೆಗಿಳಿದ ವಾಹನಗಳು
🎬 Watch Now: Feature Video
ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆ ಹಾವೇರಿಯಲ್ಲಿ ವಾಹನಗಳು ರಸ್ತೆಗಿಳಿದಿವೆ. ಇದರಿಂದ ಅಲರ್ಟ್ ಆಗಿರುವ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಬೈಕ್ನಲ್ಲಿ ಒಬ್ಬರ ಸಂಚಾರಕ್ಕೆ ಮಾತ್ರ, ಕಾರಿನಲ್ಲಿ ಮೂವರು ಸಂಚರಿಸಬಹುದಾಗಿದೆ. ನಿಯಮ ತಪ್ಪಿದ್ದಲ್ಲಿ 500 ರೂ. ದಂಡದ ಜೊತೆ ಕಾಲ್ನಡಿಗೆಯ ಶಿಕ್ಷೆ ವಿಧಿಸಿದ್ದಾರೆ. ಇನ್ನು ಅಗತ್ಯ ವಸ್ತುಗಳ ಅಂಗಡಿಗಳ ಬಾಗಿಲು ತೆರೆದಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಪೊಲೀಸರು ತಿಳಿಸಿದ್ದಾರೆ.