ಅನ್ಲಾಕ್ ಬಳಿಕ ಎರಡನೇ ವಾರವೂ ಕುಷ್ಟಗಿ ಜಾನುವಾರು ಸಂತೆಯಲ್ಲಿ ನೀರಸ ಪ್ರತಿಕ್ರಿಯೆ - Livestock fair
🎬 Watch Now: Feature Video
ಕೊಪ್ಪಳ: ಜಿಲ್ಲೆಯ ಕುಷ್ಟಗಿಯಲ್ಲಿ ಕೊರೊನಾ ಭೀತಿ ಹಿನ್ನೆಲೆ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಸ್ಥಗಿತಗೊಂಡಿದ್ದ ಜಾನುವಾರು ಸಂತೆ ಅನ್ಲಾಕ್ ಬಳಿಕ ಮತ್ತೆ ಆರಂಭವಾಗಿದೆ. ಆ ಕಳೆದ ಸೆ.6 ರ ಜಾನುವಾರು ಸಂತೆ ನಡೆದರೂ ಅಷ್ಟೇನು ಜಾನುವಾರು ಆಗಮಿಸಲಿರಲಿಲ್ಲ. ಆದರೆ ಸೆ.13ರ ಜಾನುವಾರು ಸಂತೆಗೆ ಜಾನುವಾರು ಸೇರಿದ್ದರೂ ಖರೀದಿದಾರರು ಆಸಕ್ತಿ ತೋರಿಸದೇ ಇರುವುದು ಜಾನುವಾರು ಸಂತೆ ವಹಿವಾಟು ಕಡಿಮೆಯಾಗಿದೆ. ಇನ್ನು ಸಂತೆ ಸ್ಥಳದಲ್ಲಿ ಮೂಲ ಸೌಲಭ್ಯಗಳ ಕೊರತೆ ಇನ್ನೂ ಹೆಚ್ಚಾಗಿದ್ದು, ಈ ಬಗ್ಗೆ ಎಪಿಎಂಸಿ ಹಾಗೂ ಪುರಸಭೆ ಆಡಳಿತ ಮಂಡಳಿ ತಲೆಕೆಡಿಸಿಕೊಂಡಿಲ್ಲ.
Last Updated : Sep 14, 2020, 10:45 AM IST