ಉತ್ತರಕನ್ನಡದಲ್ಲಿ ಪರವಾನಿಗೆ ಬಂದೂಕು ದುರ್ಬಳಕೆ : ನವೀಕರಣ ಕಠಿಣಗೊಳಿಸಿದ ಜಿಲ್ಲಾಡಳಿತ - ಪರವಾನಿಗೆ ಬಂದೂಕು ಸುದ್ದಿ
🎬 Watch Now: Feature Video
ರಾಜ್ಯದಲ್ಲೇ ಅತೀ ಹೆಚ್ಚು ಅರಣ್ಯ ಸಂಪತ್ತನ್ನು ಹೊಂದಿರುವ ಜಿಲ್ಲೆಗಳಲ್ಲಿ ಉತ್ತರಕನ್ನಡವೂ ಒಂದು. ಸಾಕಷ್ಟು ವನ್ಯಜೀವಿ ಸಂಕುಲವನ್ನು ಹೊಂದಿರುವುದರಿಂದ ಕಾಡು ಪ್ರಾಣಿಗಳು ಆಗಾಗ ಬೆಳೆಗಳ ಹಾನಿ ಮಾಡುತ್ತಿರುತ್ತವೆ. ಇದೇ ಕಾರಣಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ರೈತರು ಬಂದೂಕುಗಳ ಪರವಾನಿಗೆ ಪಡೆದಿದ್ದಾರೆ. ಆದರೆ, ಇದು ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳಿಗೆ ದಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಂದೂಕು ಪರವಾನಿಗೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.