ಉಡುಪಿ: ಸೀಲ್​​ಡೌನ್ ಪ್ರದೇಶಗಳಿಗೆ ತೆರಳಿ ದಿನಸಿ ವಿತರಿಸಿದ ಮುಖಂಡರು..! - Leaders delivering groceries to seal-down areas

🎬 Watch Now: Feature Video

thumbnail

By

Published : Aug 14, 2020, 5:40 PM IST

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ವೈರಸ್ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ದಿನಕ್ಕೆ ಎರಡು ಸಾವಿರಕ್ಕೂ ಹೆಚ್ಚು ಜನರ ಟೆಸ್ಟ್ ನಡೆಯುತ್ತಿದೆ. ಇದೀಗ ಹೋಂ ಕ್ವಾರಂಟೈನ್​​ಗಳ‌ ಸಂಖ್ಯೆಯೂ ಹೆಚ್ಚುತ್ತಿದ್ದು, ಕೆಲವೊಂದು ಕಡೆ ಆಹಾರ ಸಮಸ್ಯೆಗಳು ಉಂಟಾಗುತ್ತಿದೆ. ಈ ಹಿನ್ನೆಲೆ ಕೆಲ ಪ್ರಮುಖರು ಸೀಲ್​​ಡೌನ್ ಪ್ರದೇಶಗಳಿಗೆ ತೆರಳಿ ದಿನಸಿ ಸಾಮಗ್ರಿ ವಿತರಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷ ಉದ್ಯಮಿ ಅಂಡಾರು ದೇವಿಪ್ರಸಾದ್ ಶೆಟ್ಟಿಯವರು ಇಂತಹ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಸುಮಾರು 500 ಕ್ಕೂ ಹೆಚ್ಚು ಕಿಟ್​​ಗಳನ್ನು ವಿತರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.