ದೊಡ್ಡಬಳ್ಳಾಪುರದಲ್ಲಿ ಲಾಕ್ಡೌನ್ ನಡುವೆ ಕಾರ್ಮಿಕರಿಂದ ಕೆಲಸ
🎬 Watch Now: Feature Video
ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು ಶಾಲೆ, ಕಾಲೇಜುಗಳು ಸೇರಿದಂತೆ ಕಾರ್ಖಾನೆಗಳನ್ನು ಬಂದ್ ಮಾಡಲಾಗಿದೆ. ಆದರೆ ತಾಲೂಕಿನ ಕೊಡಿಗೆಹಳ್ಳಿಯ ಸಾಯಿ ಸಿಲ್ಕ್ ರೀಲಿಂಗ್ ಆ್ಯಂಡ್ ಟ್ವಿಸ್ಟಿಂಗ್ ಫ್ಯಾಕ್ಟರಿ ಮಾಲೀಕ ಮುನಿರಾಜು ಎಂಬಾತ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದ. ಫ್ಯಾಕ್ಟರಿಗೆ ಬಾಗಿಲು ಹಾಕಿ ಒಳಗೆ 15 ಕಾರ್ಮಿಕರಿಂದ ಕೆಲಸ ನಡೆಯುತ್ತಿದ್ದ ಸುದ್ದಿ ತಿಳಿದ ಕೊಡಿಗೆಹಳ್ಳಿ ಗ್ರಾಮ ಪಂಚಾಯತ್ ಅಧಿಕಾರಿಗಳು ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ, ಮಾಲೀಕನಿಗೆ ಬುದ್ಧಿ ಹೇಳಿ ಫ್ಯಾಕ್ಟರಿಯ ಬಾಗಿಲು ಹಾಕಿಸಿ ಕಾರ್ಮಿಕರನ್ನು ಮನೆಗೆ ಕಳುಹಿಸಿದರು.